DharwadLatestLeading NewsMain Post

ಸಿದ್ದರಾಮಯ್ಯನವರ ಸ್ಥಿತಿ ಅಂಡು ಸುಟ್ಟ ಬೆಕ್ಕಿನಂತಾಗಿದೆ – ಯತ್ನಾಳ್‌ ಲೇವಡಿ

ಧಾರವಾಡ: ರಾಜ್ಯದಲ್ಲಿ 160 ಸಾಮಾನ್ಯ ವಿಧಾನಸಭಾ ಕ್ಷೇತ್ರಗಳಿವೆ. ಸಿದ್ದರಾಮಯ್ಯನವರಿಗೆ (Siddaramaiah) ಒಂದೂ ಕ್ಷೇತ್ರ ಸಿಗದಂತಾಗಿದೆ. ಇದರಿಂದ ಅವರ ಸ್ಥಿತಿ ಅಂಡು ಸುಟ್ಟ ಬೆಕ್ಕಿನಂತಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ (Basanagouda Patil Yatnal) ಲೇವಡಿ ಮಾಡಿದರು.

ಧಾರವಾಡದಲ್ಲಿ (Dharawada) ಮಾತನಾಡಿದ ಅವರು, ಸಿದ್ದರಾಮಯ್ಯನವರು ಕ್ಷೇತ್ರಕ್ಕಾಗಿ ಓಡಾಡುತ್ತಿದ್ದಾರೆ. ಒಮ್ಮೆ ಕೋಲಾರಕ್ಕೆ ಹೋಗುತ್ತಾರೆ, ಒಮ್ಮೆ ಚಾಮರಾಜನಗರಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯ ಒಬ್ಬ ಸ್ವಯಂ ಘೋಷಿತ ಸಿಎಂ ಎಂದರು. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ – ಏನಿದು ವಿನಯ ಸಾಮರಸ್ಯ ಯೋಜನೆ

ಸಿದ್ದರಾಮಯ್ಯ ಹಾಗೂ ಡಿಕೆಶಿ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಪಕ್ಷದ ವಿಚಾರ. ಸಿದ್ದರಾಮಯ್ಯ ಹಾಗೂ ಡಿಕೆಶಿ ಚುನಾವಣೆಯಲ್ಲಿ ಸೋಲಬಹುದು ಎಂಬ ಕಾರಣಕ್ಕೆ ಲಾಡ್ ಹಾಗೆ ಹೇಳಿರಬಹುದು ಎಂದು ತಿಳಿಸಿದರು.

ಮಂಗಳೂರು ಕುಕ್ಕರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಸಂಬಂಧದ ತನಿಖೆಯಲ್ಲಿ ಯಾವುದೇ ವೈಫಲ್ಯ ಆಗಿಲ್ಲ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಅವರ ಮೇಲೆ ಕ್ರಮ ಆಗುತ್ತದೆ. ಪರೇಶ್ ಮೇಸ್ತಾ ಕೇಸ್ ಇನ್ನೊಮ್ಮೆ ತನಿಖೆ ಮಾಡಿಸುವ ಚಿಂತನೆ ನಡೆದಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಮಹೇಶ್‌ ಕುಮಟಳ್ಳಿಗೆ ಒಳ್ಳೆ ಬುದ್ಧಿ ಬರಲಿ – ಗ್ರಾಮಸ್ಥರಿಂದ ರಸ್ತೆ ಮಧ್ಯೆ ಹೋಮ ಮಾಡಿ ವಿನೂತನ ಪ್ರತಿಭಟನೆ

Live Tv

Leave a Reply

Your email address will not be published. Required fields are marked *

Back to top button