ಹುಬ್ಬಳ್ಳಿ: ದೇವರ ಗುಡಿಹಾಳ ಮತ್ತು ಸಮೀಪದ ಬೂದನಗುಡ್ಡ ಮಾರ್ಗದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಮಂಗಳವಾರ ತಡರಾತ್ರಿ ಕಲಘಟಗಿ ತಾಲೂಕು ಬೂದನಗುಡ್ಡದ ಬಳಿ ಚಿರತೆ ಸುತ್ತಾಡುತ್ತಿರುವುದನ್ನು ವ್ಯಕ್ತಿಯೊಬ್ಬರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
Advertisement
ಒಂದೂವರೆ ತಿಂಗಳುಗಳ ಹಿಂದೆ ಅಂಚಟಗೇರಿ ಬಳಿ ಚಿರತೆ ಕಾಣಿಸಿಕೊಂಡಿತ್ತು. ಬೂದನಗುಡ್ಡದ ಸುತ್ತ ಸಾಮಾನ್ಯ ಅರಣ್ಯ ಪ್ರದೇಶ ಇರುವುದರಿಂದ ಕಾಡು ಪ್ರಾಣಿಗಳ ಸುತ್ತಾಟಕ್ಕೆ ಪೂರಕವಾಗಿದೆ. ಅಂಚಟಗೇರಿ ಮತ್ತು ಬಿಡ್ನಾಳದ ಅರಣ್ಯ ಪ್ರದೇಶದಲ್ಲಿ ಚಿರತೆ ಸುತ್ತಾಡುತ್ತಿರುವುದರಿಂದ ದನಕರುಗಳನ್ನು ಮೇಯಲು ಬಿಡಬಾರದು ಮತ್ತು ಅರಣ್ಯದಲ್ಲಿ ಜನರು ಪ್ರವೇಶಿಸದಂತೆ ಸುತ್ತಲಿನ ಗ್ರಾಮಗಳಲ್ಲಿ ಡಂಗೂರ ಸಾರಿಸಲಾಗಿತ್ತು. ಇದನ್ನೂ ಓದಿ: ಪಾಕಿಸ್ತಾನ ನನಗೆ 20 ಸಾವಿರ ನೀಡಿದೆ – ತಪ್ಪೊಪ್ಪಿಕೊಂಡ ಲಷ್ಕರ್ ಉಗ್ರ
Advertisement
ಚಿರತೆಯ ಸೆರೆಗೆ ಅರಣ್ಯ ಇಲಾಖೆಯವರು ಐದಾರು ಬೋನುಗಳನ್ನು ಇಟ್ಟು ಚಿರತೆ ಹಿಡಿಯಲು ಮುಂದಾಗಿದ್ದಾರೆ. ಕಳೆದ ಭಾನುವಾರ ಧಾರವಾಡ ಬಳಿಯ ಕವಲಗೇರಿಯ ಹೊಲದಲ್ಲಿ ಸೆರೆಯಾಗಿದ್ದ ಚಿರತೆಯನ್ನು ದೂರದ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಬಿಡಲಾಗಿದೆ. ಈ ಮಧ್ಯೆ ಹುಬ್ಬಳ್ಳಿ ಹಾಗೂ ಕವಲಗೇರಿಯಲ್ಲಿ ಕಂಡಿದ್ದ ಚಿರತೆ ಒಂದೋ ಅಥವಾ ಬೇರೆಯದ್ದೋ ಎಂಬುದನ್ನು ತಿಳಿಯಲು ಹೈದರಾಬಾದ್‍ನ ಪ್ರಯೋಗಾಲಯಕ್ಕೆ ಅದರ ಲದ್ದಿಯನ್ನು ಕಳುಹಿಸಲಾಗಿದೆ. ಲದ್ದಿಯ ಡಿಎನ್‍ಎ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂದು ಧಾರವಾಡದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲದ ಸರ್ಕಾರಿ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ
Advertisement
Advertisement
ಇತ್ತೀಚೆಗೆ ಹುಬ್ಬಳ್ಳಿಯ ನೃಪತುಂಗ ಬೆಟ್ಟ ರಾಜನಗರದ ಸುತ್ತಮುತ್ತ ಚಿರತೆ ಕಾಣಿಸಿಕೊಂಡ ಪರಿಣಾಮ ಹುಬ್ಬಳ್ಳಿಯಲ್ಲಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರೆದಿದೆ. ಇದೀಗ ಮತ್ತೆ ಬೂದನಗುಡ್ಡ ಬಳಿ ಚಿರತೆ ಪ್ರತ್ಯಕ್ಷವಾಗಿರುವುದರಿಂದ ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡ ಚಿರತೆ ಇದೇಯ್ಯೋ, ಅಲ್ವೋ ಅನ್ನೋದು ಸಹ ಅರಣ್ಯ ಇಲಾಖೆಯ ಸಿಬ್ಬಂದಿಗೆ ತೆಲೆನೋವಾಗಿ ಪರಿಗಣಿಸಿದೆ.