Districts

ನಾಗಮಂಗಲದ ಸರ್ಕಾರಿ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ

Published

on

Share this

ಮಂಡ್ಯ: ಒಂದೇ ಕಾಲೇಜಿನಲ್ಲಿ 28 ಮಂದಿಗೆ ಕೊರೊನಾ ತಗುಲಿರುವ ಕಾರಣ ಒಂದು ವಾರಗಳ ಕಾಲ ಆ ಕಾಲೇಜನ್ನು ಸೀಲ್‍ಡೌನ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಜರುಗಿದೆ.

ನಾಗಮಂಗಲ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 28 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಕಾಲೇಜನ್ನು ಒಂದು ವಾರಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಈ ಕಾಲೇಜಿನಲ್ಲಿ 412 ವಿದ್ಯಾರ್ಥಿನಿಯರು ಇದ್ದು, ಈ ಪೈಕಿ 28 ಮಂದಿ ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದೆ. ಇದನ್ನೂ ಓದಿ:  ಪಾಕಿಸ್ತಾನ ನನಗೆ 20 ಸಾವಿರ ನೀಡಿದೆ – ತಪ್ಪೊಪ್ಪಿಕೊಂಡ ಲಷ್ಕರ್ ಉಗ್ರ

ಸೋಂಕು ತಗುಲಿರುವ ವಿದ್ಯಾರ್ಥಿನಿಯರಿಗೆ ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿನಿಯರನ್ನು ಹಾಗೂ ಉಪನ್ಯಾಸಕರನ್ನು ಕ್ವಾರಂಟೈನ್ ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications