ಶ್ರೀನಗರ: ಪಾಕಿಸ್ತಾನದ ಭಯೋತ್ಪಾದಕ ಅಲಿ ಬಾಬರ್ ಪತ್ರಾ ನಾನು ನಾನು ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನದ ಸೇನೆಯಿಂದ ತರಬೇತಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ.
ಸೆಪ್ಟೆಂಬರ್ 26 ರಂದು ಉರಿ ಸೆಕ್ಟರ್‍ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಿಂದ ಜೀವಂತವಾಗಿ ಸೆರೆಹಿಡಿಯಲಾದ ಪಾಕಿಸ್ತಾನಿ ಭಯೋತ್ಪಾದಕನನ್ನು ಬುಧವಾರ ಮಾಧ್ಯಮದವರ ಮುಂದೆ ಹಾಜರುಪಡಿಸಲಾಯಿತು ಈ ವೇಳೆ 19 ವರ್ಷದ ಅಲಿ ಬಾಬರ್ ಪತ್ರಾ ಪ್ರತಿಕ್ರಿಯಿಸಿದ್ದು, ನಾನು ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನದ ಸೇನೆಯಿಂದ ತರಬೇತಿ ಪಡೆದುಕೊಂಡಿದ್ದೇನೆ. ನನಗೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಂದ 20 ಸಾವಿರ ರೂ. ನೀಡಲಾಗಿತ್ತು ಎಂದಿದ್ದಾನೆ.
ಈ ನಡುವೆ ತನ್ನ ತಾಯಿಯನ್ನು ನೆನೆದ ಅಲಿ, ಪಾಕಿಸ್ತಾನದಲ್ಲಿ ತನ್ನ ತಾಯಿಯ ಬಳಿಗೆ ಕರೆದುಕೊಂಡು ಹೋಗುವಂತೆ ಗೋಳಾಡಿದರೂ, ನನ್ನನ್ನು ಭಾರತಕ್ಕೆ ಕಳುಹಿಸಿದರು ಎಂದು ಹೇಳಿಕೊಂಡನು. ಇದನ್ನೂ ಓದಿ: ವಿದ್ಯಾರ್ಥಿಗಳು ತರಗತಿಗೆ ಚಕ್ಕರ್, ರೊಮ್ಯಾನ್ಸ್ಗೆ ಹಾಜರ್
ಭಾರತೀಯ ಸೇನೆಯು ರಕ್ತಪಾತವನ್ನು ನಡೆಸುತ್ತೆ ಎಂದು ನಾವು ತಿಳಿದುಕೊಂಡಿದ್ದೆ. ಆದರೆ ಇಲ್ಲಿ ಎಲ್ಲವೂ ಶಾಂತಿಯುತವಾಗಿವೆ. ಭಾರತೀಯ ಸೇನೆಯು ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ ಎಂದು ನಾನು ನನ್ನ ತಾಯಿಗೆ ಹೇಳುತ್ತೇನೆ ಎಂದು ಭಾರತೀಯ ಸೇನೆವನ್ನು ಪ್ರಶಂಸಿದ್ದಾನೆ. ಇದನ್ನೂ ಓದಿ: ವಾಹನ ಸವಾರರ ಮೇಲೆ ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿ ಗೂಂಡಾಗಿರಿ
ಭಾರತದಲ್ಲಿ ನಾನು ದಿನಕ್ಕೆ ಐದು ಬಾರಿ ಅಜಾನ್(ಪ್ರಾರ್ಥನೆಗಾಗಿ ಕರೆ) ಕೇಳಬಹುದು. ಭಾರತೀಯ ಸೇನೆಯ ನಡವಳಿಕೆ ಪಾಕಿಸ್ತಾನದ ಸೇನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಇದರಿಂದ ನನಗೆ ಕಾಶ್ಮೀರದಲ್ಲಿ ಶಾಂತಿ ಇದೆ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾನೆ.