ಬಾಕ್ಸ್ ಆಫೀಸ್ ನಲ್ಲಿ ಸಖತ್ ಕಮಾಯಿ ಮಾಡಿರುವ ವಿಜಯ್ ನಟನೆಯ ‘ಲಿಯೋ’ (Leo) ಸಿನಿಮಾ ಸದ್ಯದಲ್ಲೇ ಒಟಿಟಿಯಲ್ಲೂ (OTT) ಸ್ಟ್ರೀಮಿಂಗ್ ಆಗಲಿದೆ. ಭಾರೀ ಗೆಲುವಿನ ಬೆನ್ನಲ್ಲೇ ಒಟಿಟಿಯಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಗಲಿದೆ ಎಂದು ಅಂದಾಜಿಸಲಾಗುತ್ತಿದೆ. ನವೆಂಬರ್ 16 ರಿಂದ ನೆಟ್ ಪ್ಲಿಕ್ಸ್ ನಲ್ಲಿ ಲಿಯೋ ನೋಡಬಹುದಾಗಿದೆ.
ಕಾಲಿವುಡ್‌ನಲ್ಲಿ (Kollywood) ವಿಜಯ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಅವರ ಸಿನಿಮಾಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ‘ಲಿಯೋ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿದ್ದರಿಂದ ಮತ್ತೊಂದು ಹೊಸ ಸಿನಿಮಾದಲ್ಲಿ ವಿಜಯ್ ಬ್ಯೂಸಿಯಾಗಿದ್ದಾರೆ.
ವಿಜಯ್ ನಟನೆಯ 68ನೇ ಚಿತ್ರಕ್ಕೆ ವೆಂಕಟ್ ಪ್ರಭು (Venkat Prabhu) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಸರಾ ಹಬ್ಬದ (ಅ.24) ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಚಿತ್ರದ ದೊಡ್ಡ ತಾರಾ ಬಳಗ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.
ದಳಪತಿ ವಿಜಯ್ ಜೊತೆ ಬಹುಭಾಷಾ ನಟ ಕನ್ನಡಿಗ ಪ್ರಭುದೇವ (Prabhudeva), ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು (Yogi Babu) ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುತೇಕರು ಮುಹೂರ್ತ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.
‘ಲಿಯೋ’ (Leo) ಬಳಿಕ 68ನೇ ಚಿತ್ರಕ್ಕೆ ವಿಜಯ್ & ಟೀಂ ಚಾಲನೆ ನೀಡಿರೋದು ದಳಪತಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಸಿನಿಮಾ ಬಗೆಗಿನ ಹೆಚ್ಚಿನ ಅಪ್‌ಡೇಟ್‌ಗಾಗಿ ಎದುರು ನೋಡ್ತಿದ್ದಾರೆ.