ಉಪ್ಪಿನಕಾಯಿ ಎಂದರೇ ಯಾರಿಗೇ ತಾನೇ ಇಷ್ಟವಿರುವುದಿಲ್ಲ. ಅದರಲ್ಲಿಯೂ ಅಜ್ಜಿ ಮಾಡಿದ ಉಪ್ಪಿನಕಾಯಿ ಎಂದರೇ ಬಾಯಲ್ಲಿ ನೀರು ಬರುತ್ತೆ. ಅದಕ್ಕೆ ಇಂದು ನಿಮಗಾಗಿ ಅಜ್ಜಿ ಮಾಡುವ ರೀತಿಯೇ ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೇವೆ.
Advertisement
ಬೇಕಾಗಿರುವ ಪದಾರ್ಥಗಳು:
* ನಿಂಬೆಕಾಯಿ – 12
* ಮೆಣಸಿನಕಾಯಿ ಪುಡಿ – 3 ಟೀಸ್ಪೂನ್
* ಹಸಿಮೆಣಸಿನಕಾಯಿ – 10
* ಶುಂಠಿ – 1 ಇಂಚು
* ಇಂಗು – 1 ಟೀಸ್ಪೂನ್
Advertisement
* ಅರಿಶಿನ – 1 ಟೀಸ್ಪೂನ್
* ಸಾಸಿವೆ – 3 ಟೀಸ್ಪೂನ್
* ಮೆಂತ್ಯ – 1 ಟೀಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ – 3 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲು ನಿಂಬೆಕಾಯಿಯನ್ನು ಸಣ್ಣದಾಗಿ ಕಟ್ ಮಾಡಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನ ಮಧ್ಯ ಸೀಳಿ.
* ನೀರನ್ನು ಕುದಿಸಿ ಅದಕ್ಕೆ ನಿಂಬೆಹಣ್ಣುಗಳನ್ನು ಸೇರಿಸಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
* ಶುಂಠಿಯನ್ನು ಕಟ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಎಣ್ಣೆ ಬಿಸಿ ಮಾಡಿ ಉಪ್ಪು, ಇಂಗನ್ನು ಹಾಕಿ ಹುರಿದುಕೊಳ್ಳಿ.
* ನೀರನ್ನು ಪೂರ್ತಿಯಾಗಿ ಒರೆಸಿ ಪಿಗಣಿ ಪಾತ್ರೆಗೆ ನಿಂಬೆಕಾಯಿ ಹಾಕಿ ಅದಕ್ಕೆ ಕಟ್ ಮಾಡಿದ ಶುಂಠಿ, ಹುರಿದ ಉಪ್ಪು, ಇಂಗು, ಅರಿಶಿನ, ಮೆಣಸಿನ ಪುಡಿ, ಹಸಿರು ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಇನ್ನೊಂದು ಪಾತ್ರೆಯಲ್ಲಿ ಸಾಸಿವೆ, ಮೆಂತ್ಯ ಹಾಕಿ ಒಗ್ಗರಣೆ ಮಾಡಿ ಮಸಾಲೆಯುಕ್ತ ನಿಂಬೆ ಹಣ್ಣಿಗೆ ಸೇರಿಸಿ.
* ಗಾಳಿ ಹೋಗದಂತೆ 2 ರಿಂದ 4 ದಿನ ಮುಚ್ಚಿಡಿ.