ಮುಂಬೈ: ಕಾಂಗ್ರೆಸ್‍ನಿಂದ ಹೊರಬಂದಿದ್ದರೂ ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಯಶವಂತ್‌ರಾವ್ ಚವಾಣ್ ಅವರ ಸಿದ್ಧಾಂತಗಳನ್ನು ಬಿಟ್ಟಿಲ್ಲ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ಹೇಳಿದ್ದಾರೆ.
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು (ಎನ್‍ಸಿಪಿ) ಸ್ಥಾಪಿಸಲು 1999 ರವರೆಗೆ ಕಾಯುತ್ತಿದ್ದ ಬಗ್ಗೆ ಪಶ್ಚಾತ್ತಾಪವಿಲ್ಲ. ನನ್ನ ಕುಟುಂಬ ಕೆಲವು ಸಿದ್ಧಾಂತಗಳನ್ನು ಅನುಸರಿತ್ತು. ಎಡಪಂಥೀಯ ಸಿದ್ಧಾಂತವನ್ನು ನಮ್ಮ ಪಕ್ಷ ಪ್ರತಿಪಾದಿಸುತ್ತಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ
Advertisement
Advertisement
ನಾನು 1958 ರಲ್ಲಿ ಪುಣೆಗೆ ಬಂದಾಗ ನನ್ನಂತಹ ಯುವಕರು ಗಾಂಧಿ, ನೆಹರೂ ಮತ್ತು ಚವಾಣ್ ಅವರ ಸಿದ್ಧಾಂತಗಳಿಂದ ಪ್ರೇರಣೆಗೊಂಡು ಆ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕೆಲಸ ಮಾಡಿದೆವು. ಕಾಂಗ್ರೆಸ್‍ಗೆ ಆ ಸಿದ್ಧಾಂತಗಳೇ ಆಧಾರಸ್ತಂಭವಾಗಿತ್ತು. ಅದಕ್ಕಾಗಿಯೇ ನಾನು ಕಾಂಗ್ರೆಸ್‍ನಿಂದ ದೂರ ಹೋಗುವ ಬಗ್ಗೆ ಯೋಚಿಸಿರಲಿಲ್ಲ. ಬೇರೆ ಯಾವುದನ್ನು ಸಹ ಮಾಡಬೇಕೆಂದು ಚಿಂತಿಸಿರಲಿಲ್ಲ. ಕಾಂಗ್ರೆಸ್ ನನ್ನನ್ನು ಆರು ವರ್ಷಗಳ ಕಾಲ ಪಕ್ಷದಿಂದ ತೆಗೆದುಹಾಕಿದ್ದರಿಂದ ನಾನು ಎನ್‍ಸಿಪಿ ರಚಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.
Advertisement
ನಾವು ಕಾಂಗ್ರೆಸ್ ತೊರೆದು ಎನ್‍ಸಿಪಿ ಸ್ಥಾಪಿಸಿದ್ದರೂ, ಗಾಂಧಿ, ನೆಹರೂ ಮತ್ತು ಚವಾಣ್ ಅವರ ಚಿಂತನೆಗಳನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ
Advertisement
Sharad Pawar, Congress, NCP, Mumbai