ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ (Medical Courses) ಅರ್ಹರಾಗಿರುವ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಳ್ಳಲು ಮತ್ತು ಯುಜಿ ನೀಟ್ (NEET-UG) ರೋಲ್ ನಂಬರನ್ನು ನಮೂದಿಸಲು ಆ.16ರ ಬೆಳಗ್ಗೆ 6 ಗಂಟೆಯಿಂದ ಆ.19ರ ಬೆಳಗ್ಗೆ 10 ಗಂಟೆಯವರೆಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇದು ಅಂತಿಮ ಅವಕಾಶವಾಗಿದ್ದು, ಅರ್ಹರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶುಕ್ರವಾರ ತಿಳಿಸಿದೆ.
ಇದುವರೆಗೂ ನೀಡಿದ್ದ ಅವಕಾಶಗಳನ್ನು ಬಳಸಿಕೊಳ್ಳದೇ ಇರುವವರು ಆನ್‌ಲೈನ್ ಮೂಲಕ ನೋಂದಾಯಿಸಿ, ಶುಲ್ಕವನ್ನು ಪಾವತಿಸಬಹುದು. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ಜಾಲತಾಣವನ್ನು ನೋಡಬಹುದು ಎಂದು ಪ್ರಕಟಣೆ ಹೇಳಿದೆ. ಇದನ್ನೂ ಓದಿ: ಜವಾಹರಲಾಲ್ ನೆಹರು ತಾರಾಲಯ ಆಧುನಿಕರಣಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸಿ: ಬೋಸರಾಜು ಸೂಚನೆ
Advertisement
Advertisement
ಇದೇ ರೀತಿಯಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ನಡೆದಿರುವ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದಿದ್ದ ಎನ್‌ಆರ್‌ಐ/ವಿದೇಶಿ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಕೆಟಗರಿ-2ರಿಂದ ಕೆಟಗರಿ-8ರ ವ್ಯಾಪ್ತಿಯ ವಿದ್ಯಾರ್ಥಿಗಳು ಆ.19ರ ಬೆಳಗ್ಗೆ 11 ಗಂಟೆಗೆ ಮೂಲ ಪ್ರಮಾಣಪತ್ರಗಳೊಂದಿಗೆ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: Tungabhadra Dam |ಈವರೆಗೂ ಸಾಧ್ಯವಾಗಿಲ್ಲ ತಾತ್ಕಾಲಿಕ ಗೇಟ್- ಮಾಧ್ಯಮಗಳ ಚಿತ್ರೀಕರಣಕ್ಕೆ ನಿರ್ಬಂಧ
Advertisement