ಕೀವ್: ರಷ್ಯಾ ಆಕ್ರಮಣದಿಂದ ಉಕ್ರೇನ್ ತತ್ತರಿಸಿ ಹೋಗಿದೆ. ಈ ಮಧ್ಯೆ ಉಕ್ರೇನ್‍ನಲ್ಲಿ ಸಿಲುಕಿರುವ ಅನೇಕ ವಿದ್ಯಾರ್ಥಿಗಳಿ ಸಿಖ್ ಧರ್ಮದ ವ್ಯಕ್ತಿಯೊಬ್ಬ ರೈಲಿನಲ್ಲಿ ಆಹಾರ ನೀಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಉಕ್ರೇನ್‍ನ ಶಿಕ್ಷಣ ಸಚಿವಾಲಯದ ಪ್ರಕಾರ ದೇಶದಲ್ಲಿ ಸುಮಾರು 80,000 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೊರಾಕೊ, ಅಜೆರ್ಬೈಜಾನ್, ತುರ್ಕಮೆನಿಸ್ತಾನ್ ಮತ್ತು ನೈಜೀರಿಯಾ ಅದರಲ್ಲಿಯೂ ಹೆಚ್ಚಾಗಿ ಭಾರತೀಯರು ಉಕ್ರೇನ್‍ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಸದ್ಯ ರಷ್ಯಾದ ಆಕ್ರಮಣದಿಂದ ಉಕ್ರೇನ್‍ನಲ್ಲಿ ಕಠೋರ ಪರಿಸ್ಥಿತಿಯಲ್ಲಿದ್ದು, ಅನೇಕವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಮತ್ತು ಅವರ ಸುರಕ್ಷತೆಯ ಬಗ್ಗೆ ಭಯಪಡುವಂತೆ ಆಗಿದೆ. ಇದನ್ನೂ ಓದಿ: ಅಲಿಯಾಗೆ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು
Advertisement
Advertisement
ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳು ಅವರ ಕುಟುಂಬಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಉಕ್ರೇನ್‍ನಲ್ಲಿ ತಾವು ಇರುವ ಲೋಕೆಶನ್‍ಗಳನ್ನು ಶೇರ್ ಮಾಡಿದ್ದಾರೆ. ತಮ್ಮನ್ನು ಆದಷ್ಟು ಬೇಗ ತಮ್ಮ ದೇಶಗಳಿಗೆ ಸ್ಥಳಾಂತರಗೊಳಿಸುವಂತೆ ಆಯಾ ರಾಷ್ಟ್ರೀಯ ಸರ್ಕಾರಗಳನ್ನು ವಿನಂತಿಸಿಕೊಳ್ಳುತ್ತಿದ್ದಾರೆ.
Advertisement
#Ukraine: Guru Ka Langar on a train
These guys were fortunate to get on this train which is travelling east of Ukraine to the west (to Polish border )
Hardeep Singh has been providing Langar and assistance to many students from different countries.What a guy#UkraineRussia pic.twitter.com/CyWZnWVePz
— ravinder singh (@RaviSinghKA) February 25, 2022
ಈ ನಡುವೆ ಉಕ್ರೇನ್‍ನ ಪೋಲೆಂಡ್‍ನ ಗಡಿಗೆ ಪ್ರಯಾಣಿಸುವ ವೇಳೆ ರೈಲಿನಲ್ಲಿ ಹಸಿದ ವಿದ್ಯಾರ್ಥಿಗಳಿಗೆ ಆಹಾರವನ್ನು ನೀಡುತ್ತಿರುವ ಹೃದಯ ಸ್ಪರ್ಶಿ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಟ್ವಿಟರ್‍ನಲ್ಲಿ ರವೀಂದರ್ ಸಿಂಗ್ (ಖಾಲ್ಸಾ ಎಐಡಿ ಸ್ಥಾಪಕ-ಸಿಇಒ) ಹಂಚಿಕೊಂಡಿದ್ದು, ಚಲಿಸುವ ರೈಲಿನಲ್ಲಿ ವಿದ್ಯಾರ್ಥಿಗಳಿಗೆ ಆಹಾರ ವಿತರಿಸುತ್ತಿರುವುದನ್ನು ಮತ್ತು ತಿನ್ನುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಸೋದರಸಂಬಂಧಿ ಮದುವೆಯಲ್ಲಿ ಯಶ್ ಫ್ಯಾಮಿಲಿ ಫುಲ್ ಮಿಂಚಿಂಗ್!
ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಿಂದ ಹಲವಾರು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಒಟ್ಟಾರೆ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಜನರ ಜಾತಿ, ಧರ್ಮ ಮತ್ತು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೇ ಸಿಖ್ ಧರ್ಮದ ವ್ಯಕ್ತಿ ಆಹಾರವನ್ನು ಹಂಚಿರುವುದು ಮಾನವೀಯತೆಯನ್ನು ಎತ್ತಿ ತೋರಿಸುವಂತಿದೆ ಎಂದರೆ ತಪ್ಪಾಗಲಾರದು.