Karnataka LandSlide | ರಾಜ್ಯದಲ್ಲೂ ಭೂ ಕುಸಿತ ಪ್ರಕರಣ ಸಂಖ್ಯೆ ಏರಿಕೆ

Public TV
2 Min Read
shirur landslide karwar

– ಪ್ರಸಕ್ತ ವರ್ಷದಲ್ಲಿ 22 ಪ್ರದೇಶಗಳಲ್ಲಿ ಭೂ ಕುಸಿತ

ಬೆಂಗಳೂರು: ಕೇರಳದ ವಯನಾಡಿನಲ್ಲಿ ಭೂ ಕುಸಿತ (LandSlide) ಪ್ರಕರಣ ಕಂಡು ಇಡೀ ದೇಶ ಕಂಬನಿ ಮಿಡಿದಿದೆ. ಜೊತೆಗೆ ಭೂ ಕುಸಿತ ಪ್ರಕರಣಗಳು ಕೂಡ ಆತಂಕ ಹುಟ್ಟಿಸುತ್ತಿವೆ. ಈ ನಡುವೆ ಕರ್ನಾಟಕದಲ್ಲೂ ಭೂ ಕುಸಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವರ್ಷ ಕರ್ನಾಟಕದ 22 ಪ್ರದೇಶಗಳಲ್ಲಿ ಭೂ ಕುಸಿತ ಆಗಿದೆ.

ವಿಪತ್ತು ನಿರ್ವಹಣಾ ಇಲಾಖೆ ಎಲ್ಲೆಲ್ಲೆ ಭೂ ಕುಸಿತ ಆಗಿದೆ. ಭೂಕುಸಿತಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಉತ್ತರ ಕನ್ನಡ, ಹಾಸನ, ಕೊಡಗು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗಳಲ್ಲಿ ಭೂ ಕುಸಿತ ಆಗಿದೆ. ಕರ್ನಾಟಕದಲ್ಲಿ ಈ ವರ್ಷ 22 ಕಡೆ ಭೂ ಕುಸಿತ ಸಂಭವಿಸಿದ್ದು, ‌ಜಿಲ್ಲಾವಾರು, ತಾಲ್ಲೂಕುವಾರು, ಗ್ರಾಮ ಪಂಚಾಯಿತಿವಾರು ಭೂ ಕುಸಿತ ಪ್ರಕರಣಗಳ ಪಟ್ಟಿ ʻಪಬ್ಲಿಕ್ ಟಿವಿʼಗೆ ಲಭಿಸಿದೆ. ಅತಿಹೆಚ್ಚು ಭೂಕುಸಿತ ಯಾವ ಜಿಲ್ಲೆಯಲ್ಲಿ ಭೂಕುಸಿತ ಆಗಿದೆ? ಎಂಬುದರ ಮಾಹಿತಿ ಇಲ್ಲಿದೆ.

landslide effects 1

ಭೂ ಕುಸಿತ ಆಗಿರುವ ಪ್ರದೇಶಗಳು
1. ಉತ್ತರ ಕನ್ನಡ ಜಿಲ್ಲೆ
* ಹೊನ್ನಾವರ ತಾಲ್ಲೂಕಿನ ಯಲಗುಪ್ಪ ಟು ಧನ್ವಂತರಿ ಕ್ರಾಸ್
* ಶಿರೂರು
* ಕುಮಟ ತಾಲ್ಲೂಕಿನ ಬೆರ್ಗಿ
* ಕುಮಟ ತಾಲ್ಲೂಕಿನ ಸುರವಾಣಿ ಜೆಡ್ಡಿ

2. ಕೊಡಗು ಜಿಲ್ಲೆ
* ಮಡಿಕೇರಿಯ ಕೊಯಗಾಡು ಗೌರ್ನಮೆಂಟ್ ಹೈಸ್ಕೂಲ್ ಗುಡ್ಡೆಗಡೆ
* ಸೋಮವಾರ ಪೇಟೆಯ ಕೆಳಗುರು
* ಮಡಿಕೇರಿಯ ಜೋಡುಪುಲ ಗೌರ್ನಮೆಂಟ್ ಸ್ಕೂಲ್
* ಸೋಮವಾರ ಪೇಟೆಯಿಂದ ಶಾಂತಹಳ್ಳಿ ಮುಖ್ಯರಸ್ತೆ
* ಮಡಿಕೇರಿಯ ಮೂರ್ನಾಡು ನಾಪೋಕ್ಲು ರೋಡ್ ಹತ್ತಿರ ಹೊಡ್ಡೂರು
* ಸೋಮವಾರ ಪೇಟೆಯ ಮಾದಾಪುರ

3. ಚಿಕ್ಕಮಗಳೂರು ಜಿಲ್ಲೆ
* ಸರ್ವೆ ರೋಡ್ ಜಯಪುರ – ಕೊಪ್ಪ
* ದೇವರ ಮನೆ ರೋಡ್
* ಕಳಸ ತಾಲ್ಲೂಕಿನ ದೇವರ ಮನೆ ರೋಡ್
* ಮೂಡಿಗೆರೆಯ ಕೆಳಗುರು
* ಮೂಡಿಗೆರೆಯ ತಲಗೋಡು
* ಕಳಸದ ಮಣ್ಣಿನ ಪಾಲು
* ಕಳಸದ ಸಂಶೆ

4. ಶಿವಮೊಗ್ಗ ಜಿಲ್ಲೆ
* ತೀರ್ಥಹಳ್ಳಿ ವಿಠಲನಗರ
* ಹೊಸನಗರದ ಸಮೀತ ಬ್ರಹ್ಮವಡ

5. ಹಾಸನ ಜಿಲ್ಲೆ
* ಸಕಲೇಶಪುರ ತಾಲ್ಲೂಕಿನ NH75 ಗುಳಾಗಾಳೆ

Share This Article