ಪಾಟ್ನಾ: ಮೆಟ್ಟಿಲು ಇಳಿಯುವಾಗ ಎಡವಿ ಬಿದ್ದು ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಬಲ ಭುಜದ ಮೂಳೆ ಮುರಿದಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ನಿನ್ನೆ ಪಾಟ್ನಾದಲ್ಲಿರುವ ತಮ್ಮ ಪತ್ನಿ ರಾಬ್ರಿ ದೇವಿ ಅವರ ನಿವಾಸದಲ್ಲಿ ತಂಗಿದ್ದರು. ಮನೆಯಲ್ಲಿ ಮೆಟ್ಟಿಲು ಇಳಿಯುವಾಗ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೇ ಎಡವಿ ಬಿದ್ದಿದ್ದಾರೆ. ಇದರಿಂದಾಗಿ ಅವರ ಭುಜ ಮತ್ತು ಬೆನ್ನಿಗೆ ಪೆಟ್ಟಾಗಿದೆ. ಬಲ ಭುಜದ ಮೂಳೆ ಮುರಿದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಂಡೀಗೋದ ನೂರಾರು ಸಿಬ್ಬಂದಿಗೆ ಒಂದೇ ದಿನ ಅನಾರೋಗ್ಯ – ತನಿಖೆಗೆ ಡಿಜಿಸಿಎ ಸೂಚನೆ
ಲಾಲೂ ಪ್ರಸಾದ್ ಅವರನ್ನು MRI ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ ಭುಜದ ಭಾಗಕ್ಕೆ ಪೆಟ್ಟಾಗಿರುವುದು ತಿಳಿದುಬಂದಿದೆ. ಬಳಿಕ ಚಿಕಿತ್ಸೆ ನೀಡಿ ಡಿಶ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ: ಅವರನ್ನು ಸೆರೆಹಿಡಿಯಲು ಬೆಳಗ್ಗೆಯವರೆಗೂ ಕಾದು ಕುಳಿತಿದ್ದೆವು – ಉಗ್ರರನ್ನು ಗ್ರಾಮಸ್ಥರು ಬಂಧಿಸಿದ ಕಥೆ ಓದಿ
ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಿಂದ ಹಲವು ವರ್ಷಗಳಿಂದ ಮೇವು ಹಗರಣ ಪ್ರಕರಣಗಳಲ್ಲಿ ದೋಷಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಈಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.