ಸ್ಯಾಂಡಲ್‌ವುಡ್ ಬ್ಯೂಟಿಸ್ ನೇಹಾ ಗೌಡ- ಕವಿತಾ ಗೌಡ (Kavitha Gowda) ಮತ್ತೆ ಸುದ್ದಿಯಲ್ಲಿದ್ದಾರೆ. ಕಿರುತೆರೆ ಪ್ರೇಕ್ಷಕರ ಫೇವರೇಟ್ ಚಿನ್ನು ಮತ್ತು ಗೊಂಬೆ ಮತ್ತೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ತಿದ್ದಾರೆ. ‘ಪುಣ್ಯವತಿ’ (Punyavathi Serial) ಸೀರಿಯಲ್‌ನಲ್ಲಿ ಅತಿಥಿ ಪಾತ್ರ ಮಾಡುವ ಮೂಲಕ ಹೀರೋ ನಂದನ್‌ಗೆ ಸಾಥ್ ನೀಡ್ತಿದ್ದಾರೆ.
ಲಕ್ಷ್ಮಿ ಬಾರಮ್ಮ (Lakshmi Baramma) ಸೀರಿಯಲ್ ಮೂಲಕ ಚಿನ್ನು- ಗೊಂಬೆಯಾಗಿ ಕವಿತಾ ಮತ್ತು ನೇಹಾ (Neha Gowda) ಮೋಡಿ ಮಾಡಿದ್ದರು. ಚಂದನ್ ಮಡದಿಯರಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಈಗ ಅಂತಹದ್ದೇ ಟ್ರೈಯಾಂಗಲ್ ಲವ್ ಸ್ಟೋರಿ ಪುಣ್ಯವತಿ ಟ್ರ್ಯಾಕ್ ನಡೆಯುತ್ತಿದೆ. ನಂದನ್-ಪದ್ಮಿನಿ ಮತ್ತು ಪೂರ್ವಿ ಕಥೆ ನೋಡುಗರಿಗೆ ಥ್ರಿಲ್ ಕೊಡ್ತಿದೆ. ಇದನ್ನೂ ಓದಿ:ಗುರು ರಾಯರ ಸನ್ನಿಧಿಯಲ್ಲಿ ‘ಚಿನ್ನದ ಮಲ್ಲಿಗೆ ಹೂವೇ’ ಟೀಮ್
ಪುಣ್ಯವತಿ ಕಥೆ ಕೂಡ ಅಕ್ಕ-ತಂಗಿಯಾಗಿದ್ದಾಗಿದ್ದು, ಅಕ್ಕ ಪದ್ಮಿನಿ ಮದುವೆ ಆಗಬೇಕಾದ ಹುಡಗನನ್ನ ಪರಿಸ್ಥಿತಿಗೆ ಕಟ್ಟು ಬಿದ್ದು ತಂಗಿ ಪೂರ್ವಿ ಮದುವೆ ಆಗಿದ್ದಾಳೆ. ಮೂವರ ಜೀವನ ಅತಂತ್ರ ಸ್ಥಿತಿಗೆ ತಲುಪುತ್ತೆ. ಎಲ್ಲ ಸರಿ ಮಾಡುವ ಪ್ರಯತ್ನದಲ್ಲಿದ್ದ ನಾಯಕ ನಂದನ್‌ನ ಮೇಲೆ ಅಕ್ಕ-ತಂಗಿ ಇಬ್ಬರಿಗೂ ಲವ್ ಆಗಿದೆ. ಈ ಕಥೆ ಟ್ರೈಯಾಂಗಲ್ ಲವ್ ಸ್ಟೋರಿ ಸಾಗುತ್ತಿದೆ. ನಂದನ್ ಬದುಕು ಯಾರ ಜೊತೆ ಎಂಬ ನಿರ್ಧಾರಕ್ಕೆ ಚಿನ್ನು ಮತ್ತು ಗೊಂಬೆ ಸಾಥ್ ನೀಡುತ್ತಿದ್ದಾರೆ.
ಸದ್ಯ ಪದ್ಮಿನಿ-ಪೂರ್ವಿ ಇರುವ ಪರಿಸ್ಥಿತಿಯಲ್ಲಿ ಲಕ್ಷ್ಮೀ ಬಾರಮ್ಮ ಚಿನ್ನು-ಗೊಂಬೆ ಇದ್ದರು. ಹೀಗಾಗಿ ಪರಿಸ್ಥಿತಿಯನ್ನ ಅರಿತು ಇಬ್ಬರಿಗೂ ದಾರಿ ತೋರಿಸಲಿದ್ದಾರಂತೆ. ಈ ಮೂಲಕ ಚಿನ್ನು ಕವಿತಾ ಗೌಡ ಹಾಗೂ ಗೊಂಬೆ ನೇಹಾ ಗೌಡ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದು, ತೆರೆಮೇಲೆ ಪುಣ್ಯವತಿ ಜೊತೆ ಲಕ್ಷ್ಮಿ ಬಾರಮ್ಮದ ಲಕ್ಷ್ಮಿಯರು ಮಿಂಚಲಿದ್ದಾರೆ.