ನಟ ಸುದೀಪ್ (Sudeep) ತಾಯಿಯ (Mother) ನಿಧನದ ಸುದ್ದಿ ಕೇಳಿ ಲಹರಿ ವೇಲು (Lahari Velu) ಜೆಪಿ ನಗರದಲ್ಲಿರುವ ನಟನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ನಟನ ತಾಯಿಯ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ಮಾತನಾಡಿ, ಸುದೀಪ್ ಸರ್‌ನ ನೋಡೋಕೆ ಆಗುತ್ತಿಲ್ಲ ಎಂದು ಲಹರಿ ವೇಲು ಮಾತನಾಡಿದ್ದಾರೆ. ಇದನ್ನೂ ಓದಿ:ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ಗೊತ್ತಿದೆ: ಸುದೀಪ್ ತಾಯಿ ಅಂತಿಮ ದರ್ಶನ ಪಡೆದ ರಾಘಣ್ಣ
ಸುದೀಪ್ ಸರ್ ಅವರ ತಾಯಿ ಬಹಳ ವರ್ಷದಿಂದ ನಮ್ಮ ಕುಟುಂಬಕ್ಕೆ ಪರಿಚಯ. ಅವರು ಸದಾ ನಗು ನಗುತ್ತಲೇ ಇರೋರು. ಸುದೀಪ್ ಸರ್ ಇಂಡಸ್ಟ್ರಿಗೆ ಬರುವ ಮುಂಚೆಯಿಂದಲೇ ನಮಗೆ ಪರಿಚಯಸ್ಥರು. ಅವರ ನಿಧನದ ವಿಚಾರ ತುಂಬಾ ನೋವಾಗುತ್ತಿದೆ. ಅವರು ಮನೆಗೆ ಬಂದಾಗ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈಗ ಅವರು ಇಲ್ಲ ಅನ್ನೋದು ಆಘಾತವಾಗಿದೆ. ದುಃಖದಲ್ಲಿರುವ ಸುದೀಪ್‌ರನ್ನು ನೋಡೋಕೆ ಆಗುತ್ತಿಲ್ಲ. ಇಡೀ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಲಹರಿ ವೇಲು ಮಾತನಾಡಿದ್ದಾರೆ.
ಅಂದಹಾಗೆ, ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಇಂದು (ಅ.20) ಬೆಳಗ್ಗೆ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.