ಟಾಲಿವುಡ್ ನಟಿ ಸಮಂತಾ (Samantha) ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಫಹಾದ್ ಫಾಸಿಲ್ ನಟನೆಯ ‘ಆವೇಶಂ’ (Aavesham) ಸಿನಿಮಾವನ್ನು ಸಮಂತಾ ವೀಕ್ಷಿಸಿದ್ದಾರೆ. ಫಹಾದ್ (Fahadh Faasil) ಸಿನಿಮಾ ಮೆಚ್ಚಿ ಕೊಂಡಾಡಿದ್ದಾರೆ. ಇದನ್ನೂ ಓದಿ:ಜಸ್ಟ್ ಮ್ಯಾರೀಡ್: ಶೈನ್ ಶೆಟ್ಟಿ-ಅಂಕಿತಾ ಅಮರ್ ಫೋಟೋ ವೈರಲ್
ಏ.11ರಂದು ರಿಲೀಸ್ ಆದ ಆವೇಶಂ ಚಿತ್ರದಲ್ಲಿ ಫಹಾದ್ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ನಟಿ ‘ಆವೇಶಂ’ ಸಿನಿಮಾ ನೋಡಿ ಜಿನಿಯಸ್ ಎಂದು ಹೊಗಳಿದ್ದಾರೆ. ಸಿನಿಮಾದ ಹ್ಯಾಗ್ ಓವರ್‌ನಲ್ಲಿರುವುದಾಗಿ ಸ್ಯಾಮ್ ಪೋಸ್ಟ್ ಮಾಡಿದ್ದಾರೆ.


ಆದರೆ ‘ಯಶೋದ’ (Yashoda) ಮತ್ತು ‘ಖುಷಿ’ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 8 ತಿಂಗಳು ಹಿಡಿಯಿತು. ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ವರುಣ್ ಧವನ್‌ಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಹನಿ ಬನಿ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.


