ಬೆಂಗಳೂರು: ಒಂದು ಕಡೆ ಇವರ ಸಹೋದರೆಲ್ಲರೂ ರಾಜ್ಯವನ್ನು ಉಳಿಸುತ್ತೇವೆ, ಉದ್ಧಾರ ಮಾಡುತ್ತೇವೆ ಎಂದು ಪಾದಯಾತ್ರೆ ಹೊರಟಿದ್ದಾರೆ, ಆದರೆ ಇನ್ನೊಂದು ಕಡೆ ಸಿಎಂ ಮುಂದೆಯೆ ಎಂಪಿ, ಎಮ್‍ಎಲ್‍ಸಿ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್, ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಜಿಲ್ಲೆಗೆ ಬಂದಾಗ ಸೌಜನ್ಯ ಇಲ್ಲದವರು ಮಾಡುವಂತಹ ಕೆಲಸ ಇದಾಗಿದೆ. ಯಾವುದೇ ಸಣ್ಣ ಗಲಾಟೆ ಇಲ್ಲದೆ ಶಾಂತಿಯಿಂದ ಇದ್ದ ರಾಮನಗರದಲ್ಲಿ ಈಗ ಮುಖ್ಯಮಂತ್ರಿಗಳು ಬಂದಿರುವ ಕಾರ್ಯಕ್ರಮದಲ್ಲಿ ಎಂಪಿ, ಎಮ್‍ಎಲ್‍ಸಿ ಗೂಂಡಾ ರೀತಿಯ ವರ್ತನೆ ಮಾಡಿದ್ದಾರೆ. ಏನೇ ಇದ್ದರೂ ಮಾತಿನಲ್ಲಿ ಹೇಳಿ ಬಗೆಹರಿಸಿಕೊಳ್ಳಬೇಕು. ಮುಂದೆ ರಾಮನಗರ ಏನಾಗುತ್ತದೆ ಎಂದು ಈ ಘಟನೆಯಿಂದ ರಾಮನಗರ ಜನತೆ ಅರ್ಥ ಮಾಡಿಕೊಳ್ಳಬೇಕು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್, ಅಶ್ವಥ್ ನಾರಾಯಣ ನಡುವೆ ಜಟಾಪಟಿ
ಕನಕಪುರದಲ್ಲಿ ಇದ್ದ ಗುಂಡಾ ಸಂಸ್ಕೃತಿ ರಾಮನಗರಕ್ಕೆ ಎಂಟ್ರಿಯಾಗಲೂ ಬಿಡಬಾರದು. ಮುಂದೆ ರಾಮನಗರದಲ್ಲಿ ಯಾವ ರೀತಿ ನಡೆದುಕೊಳ್ಳುತ್ತೆವೆ ಎನ್ನುವುದಕ್ಕೆ ಇಂದು ನಡೆದ ಘಟನೆ ಉದಾಹರಣೆಯಾಗಿದೆ. ಹೀಗೆ ನಡೆದುಕೊಂಡರೆ ಜನರು ಬುದ್ದಿಕಲಿಸುತ್ತಾರೆ. ರಾಮನಗರಕ್ಕೆ ಯಾರ ಕೊಡುಗೆ ಎಷ್ಟು ಎನ್ನುವುದು ಗೊತ್ತು? ರಾಮನಗರದಲ್ಲಿ ನಾನು ಇರುವವೆಗೂ ಇಂಥಹ ಘಟನೆಗೆ ಅವಕಾಶ ಕೊಟ್ಟಿರಲಿಲ್ಲ ಎಂದು ಆಡಳಿತ ಪಕ್ಷದ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ
ಮುಖ್ಯಮಂತ್ರಿ ಸಭೆಯಲ್ಲಿಯೇ ಈ ರೀತಿಯ ವರ್ತನೆ ಮಾಡುವರು, ಜನಸಾಮಾನ್ಯರು ಮಾತನಾಡಲು ಬಂದಾಗ ಯಾವ ರೀತಿ ನಡೆದುಕೊಳ್ಳಬಹುದು ಎಂದು ಪ್ರಶ್ನೆ ಮೂಡುತ್ತದೆ. ಜನಗಳ ಸಮೀಪಕ್ಕೆ ತೆಗೆದುಕೊಳ್ಳಲು ಈ ರೀತಿ ಡ್ರಾಮಾ ನಡೆಯುತ್ತಿದೆ. ಈ ಸಭೆಯಲ್ಲಿ ನಡೆದುಕೊಂಡಿರುವ ಘಟೆನೆಯಿಂದ ಜನರು ಎಚ್ಚರಿಕೆಯಿಂದ ಇರಬೇಕು. ಜನ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಗಳು ಸ್ವತಂತ್ರವಾದ್ರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ: ಕೋಟ ಶ್ರೀನಿವಾಸ ಪೂಜಾರಿ
ನಿಮ್ಮ ಪಾದಯಾತ್ರೆ ಮಾಡಿದ ತಕ್ಷಣ ಆಗುವ ಕೆಲಸವೂ ಆಗುವುದಿಲ್ಲ. ಇದು ಪೊಲಿಟಿಕಲ್ಸ್ ಗಿಮಿಕ್ ಆಗಿದೆ. ಹೊಸತಾಗಿ ಮದುವೆಯಾದವರೂ ಮಾಡಿದ ಹಾಗೆ ಫೋಟೋಶೂಟ್ ಮಾಡಿದ್ದಾರೆ. ಸ್ಟೈಲ್ ನೋಡಬೇಕು ಅವರದ್ದು, ಪಾದಯಾತ್ರೆಗೆ ಫ್ರಿ ಫೋಟೋಶೂಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕುರಿತಾಗಿ ವ್ಯಂಗ್ಯವಾಡಿದ್ದಾರೆ.
ನಾಯಕರಾದವರು ಜನರ ಸಮಸ್ಯೆಗೆ ಹೇಗೆ ಪ್ರಾಮಾಣಿಕವಾಗಿ ಸ್ಪಂಧಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇನ್ನು ಸ್ವಲ್ಪ ಪಾದಯಾತ್ರೆಯನ್ನು ಅವರು ಮಾಡಲಿ. ಯಾವುದೇ ಆತಂಕ ಇಲ್ಲ ಎಂದು ಕಿಡಿಕಾರಿದ್ದಾರೆ.