ಬೆಂಗಳೂರು/ಮೈಸೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ನೀಡುವುದಾಗಿ ಸಚಿವ ಸಾರಾ ಮಹೇಶ್ ಘೋಷಣೆ ಮಾಡಿದ್ದರು. ಆದರೆ ಈ ಬಾರಿ ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಇಲ್ಲ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ(ಕೆಎಸ್‍ಐಸಿ) ಬೋರ್ಡ್ ಹಾಕಿದೆ.
ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸೀರೆ ಕೊಳ್ಳಲು ಬಂದ ಮಹಿಳೆಯರು ಬೋರ್ಡ್ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಇತ್ತ ಮೈಸೂರಿನಲ್ಲಿ ಸಿಲ್ಕ್ ಸೀರೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡದಿರಲು ಆಗ್ರಹಿಸಿ ಸಿಲ್ಕ್ ಸೀರೆ ತಯಾರಿಕಾ ಕಂಪೆನಿಯ ನೌಕರರು ಪತ್ರಿಭಟನೆ ನಡೆಸಿದ್ದಾರೆ.
Advertisement
Advertisement
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕಂಪೆನಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ. ಸದ್ಯ ಸರ್ಕಾರ ನೀಡಲು ಉದ್ದೇಶಿಸಿರುವ ಒಂದು ಸೀರೆಯ ದರ 10,500 ರೂ. ಇದ್ದು, ರಿಯಾಯಿತಿ ದರದಲ್ಲಿ 4,500 ರೂ. ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಈ ಕ್ರಮ ಕಂಪೆನಿಗೆ ಹೆಚ್ಚಿನ ನಷ್ಟ ಉಂಟು ಮಾಡುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
Advertisement
ಇದೇ ವೇಳೆ ಸರ್ಕಾರ ಒಂದೊಮ್ಮೆ ಸಿಲ್ಕ್ ಸೀರೆ ಮಾರಾಟ ಮಾಡಲು ತೀರ್ಮಾನಿಸಿದ್ದರೆ, ಮೊದಲು ರಿಯಾಯಿತಿ ದರದ ಮೊತ್ತವನ್ನು ಕಂಪೆನಿಗೆ ನೀಡಿ ಬಳಿಕ ಮಾರಾಟ ಮಾಡಿ. 10,500 ರೂ. ಬೆಲೆಯ ಸೀರೆಯನ್ನು ಮಾರಾಟ ಮಾಡಲು ನಾವು ಬಿಡುವುದಿಲ್ಲ. ಪ್ರತಿ ವರ್ಷ ಹಬ್ಬಗಳು ಬರುತ್ತದೆ. ಸರ್ಕಾರದ ಯೋಜನೆಯಿಂದ 5 ಸಾವಿರ ಸೀರೆ ನೀಡಲು ಉದ್ದೇಶಿಸಿದೆ. ಇದರಿಂದ ಸುಮಾರು 4 ಕೋಟಿ ರೂ. ನಷ್ಟವಾಗುತ್ತದೆ. ಇದು ಸರ್ಕಾರಿ ಸಂಸ್ಥೆಯಾಗಿರುವುದಿರಿಂದ ಈಗಾಗಲೇ 10% ರಿಯಾಯಿತಿ ನೀಡುತ್ತಿದೆ. ಅದ್ದರಿಂದ ಈ ಕ್ರಮವನ್ನು ಮರುಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv