ಶಿವಮೊಗ್ಗ: ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ವಸತಿ ಸಚಿವ ಜಮೀರ್ ಅಹಮ್ಮದ್ (Zameer Ahmed Khan) ಸಂವಿಧಾನ ಪೀಠಕ್ಕೆ ಅಪಮಾನ ಮಾಡಿದ್ದಾರೆ. ಅವರೊಬ್ಬ ರಾಷ್ಟ್ರದ್ರೋಹಿ, ತಕ್ಷಣ ಅವರನ್ನು ಸಚಿವ ಸಂಪುಟ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಚಿವ ಜಮೀರ್ ಅಹಮ್ಮದ್ ಮುಸ್ಲಿಂ ಸಭಾಧ್ಯಕ್ಷರಿಗೆ (Muslim Speaker) ಎಲ್ಲರೂ ತಲೆಭಾಗಿ ವಿಧಾನಸಭೆ ಚಟುವಟಿಕೆ ನಡೆಸುತ್ತಾರೆ ಎಂದು ಹೇಳಿದ್ದಾರೆ. ನಾವು ಗೌರವ ಕೊಡೋದು ಸಂವಿಧಾನಿಕ ಸಭಾಧ್ಯಕ್ಷರ ಪೀಠಕ್ಕೆ, ಮುಸ್ಲಿಂ ವ್ಯಕ್ತಿಗಲ್ಲ ಎಂದು ನುಡಿದಿದ್ದಾರೆ.
Advertisement
Advertisement
ಇಂತಹ ಹೇಳಿಕೆಗಳನ್ನ ಗಮನಿಸಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಭಾರತದ ಸಂವಿಧಾನದ ಪ್ರಕಾರ ಆಡಳಿತ ನಡೆಸುತ್ತಿದೆಯೋ? ಅಥವಾ ಪಾಕಿಸ್ತಾನದ ಇಸ್ಲಾಮಿಕ್ ಆಡಳಿತದ ಪ್ರಕಾರ ಆಡಳಿತ ನಡೆಸುತ್ತಿಯೋ ಎಂಬ ಸಂಶಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ.ಬಂಗಾಳದಲ್ಲಿ ರಿಲಯನ್ಸ್‌ನಿಂದ 20 ಸಾವಿರ ಕೋಟಿ ರೂ. ಹೂಡಿಕೆ: ಅಂಬಾನಿ ಘೋಷಣೆ
Advertisement
Advertisement
ಜಮೀರ್ ಅಹಮ್ಮದ್ ಸಾಂವಿಧಾನಿಕ ಪೀಠಕ್ಕೆ ಅಪಮಾನ ಮಾಡಿದ್ದಾರೆ. ತಕ್ಷಣ ಅವರನ್ನ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಜಮೀರ್ ಅಹಮ್ಮದ್ ಒಬ್ಬ ರಾಷ್ಟ್ರದ್ರೋಹಿ. ಅವನು ಇನ್ನು ಸಚಿವ ಸಂಪುಟದಲ್ಲಿದ್ದಾನೆ. ಅವನನ್ನು ಮೊದಲು ಕಿತ್ತು ಬಿಸಾಕಿ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಕ್ತಿ-ನಿಶ್ಯಕ್ತಿ, ಅನ್ನಭಾಗ್ಯ-ಕನ್ನಭಾಗ್ಯ, ಗೃಹ ಜ್ಯೋತಿ-ಪ್ರತಿ ಮನೆಗಳಲ್ಲೂ ಕಗ್ಗತ್ತಲು – ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಬಿಜೆಪಿ ಲೇವಡಿ
ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರು ಜಮೀರ್ ಹೇಳಿಕೆ ಬಗ್ಗೆ ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು. ಮುಂದಿನ ದಿನಗಳಲ್ಲಿ ಜನರು ಮತ ಹಾಕಬೇಕಾದ್ರೆ ಯೋಚನೆ ಮಾಡಬೇಕು. ಜಮೀರ್ ಅಹಮ್ಮದ್ ಹೇಳಿಕೆ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕು. ಮುಂಬರುವ ಚುನಾವಣೆಯಲ್ಲಿ ಹಿಂದೂ ಸಮಾಜ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದ್ದಾರೆ.