ಶಿವಮೊಗ್ಗ: ಕತ್ತಲೆಯಲ್ಲಿ ಹೇಡಿಗಳ ರೂಪದಲ್ಲಿ ರಸ್ತೆಯಲ್ಲಿ ಬರೆದು ಹೋಗಿರುವವರಿಗೆ ಆರ್‌ಎಸ್‌ಎಸ್‌ನವರು (RSS) ಹೆದರಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ತಿರುಗೇಟು ನೀಡಿದರು.
ಪಿಎಫ್‌ಐ ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆ (Road) ಮೇಲೆ ಬರೆದ ಬರಹದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಿಎಫ್‌ಐ (PFI) ಒಂದು ರಾಷ್ಟ್ರದ್ರೋಹಿ ಸಂಘಟನೆ, ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಅದಕ್ಕೆ ಕೊಲೆ ಸುಲಿಗೆ ಮಾಡ್ತಿದ್ದಾರೆ, ವಿದೇಶಿ ಹಣ ಬರುತ್ತಿದೆ. ಇದರಿಂದಲೇ ಈ ದೇಶದ ಮುಸಲ್ಮಾನ್ ಯುವಕರಿಗೆ ದಾರಿ ತಪ್ಪಿಸುವ ಕೆಲಸ ಆಗುತ್ತಿತ್ತು. ಇದೆಲ್ಲಾ ಗಮನಿಸಿ ಪಿಎಫ್‌ಐ ನಿಷೇಧಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
Advertisement
Advertisement
ಪಿಎಫ್‌ಐ ನಿಷೇಧ ಮಾಡಿದ ನಂತರವಾದ್ರೂ ಅವರ ತಂದೆ ತಾಯಿಯರು ಹುಷಾರಾಗಿರಬೇಕಿತ್ತು. ತಪ್ಪೊಪ್ಪಿಗೆ ಒಪ್ಪಿಕೊಂಡು ರಾಷ್ಟ್ರವಾದಿಗಳ ಜೊತೆ ಇರಬೇಕಿತ್ತು. ಆದರೆ ಹೇಡಿಗಳಂತೆ ಗೋಡೆಗಳ ಮೇಲೆ ಮರುಜನ್ಮ ತಗೊಂಡು ಬರ್ತೇವೆ, ಚಡ್ಡಿಗಳಿಗೆ ಬುದ್ದಿ ಕಲಿಸುತ್ತೇವೆ ಅಂತಾ ಬರೆದಿದ್ದಾರೆ. ಅವರಪ್ಪನ ಕೈನಿಂದಲೂ ಆರ್‌ಎಸ್‌ಎಸ್‌ಗೆ ಬುದ್ಧಿ ಕಲಿಸಲು ಆಗಲ್ಲ. ವಿಧ್ವಂಸಕ ಚಟುವಟಿಕೆ ಮಾಡುವವರಿಗೆ ಬಿಗಿ ಕ್ರಮ ಕೈಗೊಳ್ಳಬೇಕು ಎಂಬುದೇ ಆರ್‌ಎಸ್‌ಎಸ್ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಮುಸ್ಲಿಂ ಯುವಕರು ಅನೇಕರು ರಾಷ್ಟ್ರ ಭಕ್ತರಿದ್ದಾರೆ. ಪಿಎಫ್‌ಐ ಜೊತೆ ಸೇರಿಕೊಂಡು, ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿ, ಜೈಲಿಗೆ ಹೋಗಿ ಇಡೀ ಜೀವನ ಕಳೆದುಕೊಳ್ಳುತ್ತಾರೆ. ದಾರಿ ತಪ್ಪಿರುವ ಮುಸ್ಲಿಂ ಗೂಂಡಾಗಳಿಗೆ ಅವರ ಹಿರಿಯರು ಬುದ್ದಿ ಹೇಳಬೇಕು. ಪಿಎಫ್‌ಐ ಕುಮ್ಮಕ್ಕಿನಿಂದ ಯುವಕರು ಹಾಳಾಗಿದ್ದಾರೆ. ಗೂಂಡಾಗಿರಿ ಹೇಳಿಕೆಗೆ ಯಾವ ಆರ್‌ಎಸ್‌ಎಸ್‌ನವರು ಹೆದರಲ್ಲ. ಕತ್ತಲೆಯಲ್ಲಿ ಹೇಡಿಗಳ ರೂಪದಲ್ಲಿ ರಸ್ತೆಗೆ ಬರೆದು ಹೋಗಿದ್ದಾರೆ ಎಂದು ಟೀಕಿಸಿದರು.
ಇದರ ಬಗ್ಗೆ ಒಬ್ಬನೇ ಒಬ್ಬ ಕಾಂಗ್ರೆಸ್ಸಿಗನು ಮಾತನಾಡಿಲ್ಲ. ಕಾಂಗ್ರೆಸ್ಸಿಗರ ಕುಮ್ಮಕ್ಕಿನಿಂದಲೇ ಇಲ್ಲಿಯವರೆಗೆ ರಾಷ್ಟ್ರದ್ರೋಹಿಗಳಾಗಿ ಮುಂದುವರಿದಿದ್ದಾರೆ. ಕಾಂಗ್ರೆಸ್‌ನವರು ನಮ್ಮ ಜೊತೆ ಇದ್ದಾರೆ ಎಂಬ ಧೈರ್ಯದಿಂದಲೇ ಪಿಎಫ್ಐನವರು ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಯಾವುದೇ ಬೇರೆ ಹೆಸರಿನಲ್ಲಿ ಪಿಎಫ್ಐ ಬಂದರೂ ಅವರ ಸೊಂಟ ಮುರಿಯುವ ಕೆಲಸವನ್ನು ಮೋದಿ ಹಾಗೂ ಅಮಿತ್ ಶಾ ಮಟ್ಟ ಹಾಕ್ತಾರೆ. ಆರ್‌ಎಸ್‌ಎಸ್ ರಾಷ್ಟ್ರ ಪ್ರೇಮ ಜಾಗೃತಿ ಮಾಡ್ತಿದೆ ಎಂದರು. ಇದನ್ನೂ ಓದಿ: 873 ಪೊಲೀಸ್ ಅಧಿಕಾರಿಗಳಿಗೆ PFI ಜೊತೆ ನಂಟು: NIA
ರಾಷ್ಟ್ರದ್ರೋಹಕ್ಕೆ ಬೆಂಬಲ ಕೊಡ್ತಿರೋದು ಪಿಎಫ್‌ಐ ಆಗಿದೆ. ಪಿಎಫ್‌ಐ ಸಾಥ್ ಕೊಡ್ತಿರೋದು ಕಾಂಗ್ರೆಸ್‌ನವರಾಗಿದ್ದಾರೆ. ಕಾಂಗ್ರೆಸ್‌ನವರು ನಿಮ್ಮ ಮಕ್ಕಳಿಗೆ ಇಂತಹ ಪರಿಸ್ಥಿತಿ ಬಂದಿದ್ರೆ ಏನು ಮಾಡ್ತಿದ್ದೀರಿ. ಕಾಂಗ್ರೆಸ್‌ನವರು (Congress) ಪಿಎಫ್‌ಐ ಅವರಿಗೆ ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಚಡ್ಡಿಗಳೇ ಎಚ್ಚರ – PFI ಬ್ಯಾನ್ ಬೆನ್ನಲ್ಲೇ ರಸ್ತೆ ಮೇಲೆ ಎಚ್ಚರಿಕೆಯ ಬರಹ
ಪರೇಶ್ ಮೆಸ್ತಾ (Paresh Mesta) ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪರೇಶ್ ಮೆಸ್ತಾ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಕೇಂದ್ರ ಸರಕಾರಕ್ಕೆ (Central Government) ಮನವಿ ಮಾಡುತ್ತೇವೆ. ಅವರ ತಂದೆ ತಾಯಿ, ಹಿಂದು ಯುವಕರು ಹೇಳ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರ ಕಾಲದಲ್ಲಿ ಸರಿಯಾಗಿ ತನಿಖೆ ಆಗಲಿಲ್ಲ. ಬಹಳಷ್ಟು ದಾಖಲಾತಿ ಮುಚ್ಚಿ ಹಾಕಿದ್ದಾರೆ. ಮುಚ್ಚಿ ಹಾಕಿರೋದಕ್ಕೆ ಸರಿಯಾದ ತನಿಖೆಯ ಸರಿಯಾದ ವರದಿ ಬಂದಿಲ್ಲ. ಮರು ತನಿಖೆ ಮಾಡುವಂತೆ ಅವರ ತಂದೆ, ತಾಯಿ ಹಾಗೂ ಹಿಂದೂ ಯುವಕರು ಆಗ್ರಹಿಸಿದ್ದಾರೆ. ನಾನು ಸಹ ಮರು ತನಿಖೆಗೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.