ಕರಾವಳಿ ನಟಿ ಕೃತಿ ಶೆಟ್ಟಿ (Krithi Shetty) ಸತತ ಸೋಲುಗಳ ನಂತರ ಮತ್ತೆ ತೆಲುಗಿನ ಸಿನಿಮಾಗೆ ಮರಳಿದ್ದಾರೆ. ಒಂದೊಳ್ಳೆ ಕಥೆಯ ಮೂಲಕ ಮತ್ತೆ ತೆಲುಗು ಪ್ರೇಕ್ಷಕರ ಮನ ಗೆಲ್ಲಲು ನಟಿ ಕೃತಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
Advertisement
ಉಪ್ಪೇನಾ, ಬಂಗಾರರಾಜು ಸಿನಿಮಾಗಳ ನಂತರ ನಟಿಸಿದ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಉಪ್ಪೇನಾ (Uppena Film) ಸಿನಿಮಾದ ಸಕ್ಸಸ್‌ನಿಂದ ರಾತ್ರೋ ರಾತ್ರಿ ಸ್ಟಾರ್ ನಟಿಯಾಗಿ ಮೆರೆದವರು ಕೃತಿ ಶೆಟ್ಟಿಗೆ ಇತ್ತೀಚಿನ ದಿನಗಳಲ್ಲಿ ಲಕ್ ಕೈ ಕೊಟ್ಟಿತ್ತು. ಹಾಗಾಗಿ ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ನಟಿ ಬ್ಯುಸಿಯಾಗಿದ್ದರು. ಇದನ್ನೂ ಓದಿ:ಕಿಚ್ಚನ ಕುಟುಂಬದ ಜೊತೆ ಊಟ ಸವಿದ ವಿನಯ್ ಗೌಡ
Advertisement
View this post on Instagram
Advertisement
‘ಮನಮೆ’ (Maname Film) ಸಿನಿಮಾದ ಮೂಲಕ ಶರ್ವಾನಂದ್‌ಗೆ (Sharwanand) ನಾಯಕಿಯಾಗಿ ಕೃತಿ ಮತ್ತೆ ಮೋಡಿ ಮಾಡಿದ್ದಾರೆ. ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದ್ದು, ಇಬ್ಬರ ಪ್ರೇಮ ಕಹಾನಿ ಎಲ್ಲರ ಗಮನ ಸೆಳೆಯುತ್ತಿದೆ. ಟೀಸರ್ ಕೂಡ ಅದ್ಧೂರಿಯಾಗಿ ಮೂಡಿ ಬಂದಿದೆ. ಶರ್ವಾನಂದ್- ಕೃತಿ ನಟನೆಯ ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ.
Advertisement
ಕೃತಿ ಶೆಟ್ಟಿ ಲುಕ್ ಮತ್ತು ನಟನೆಯ ಝಲಕ್ ಟೀಸರ್‌ನಲ್ಲಿ ನೋಡಿ ಅಭಿಮಾನಿಗಳಿಗೆ ‘ಮನಮೆ’ ಸಿನಿಮಾದ ಮೇಲೆ ಭರವಸೆ ಮೂಡಿದೆ. ಶ್ರೀಲೀಲಾ (Sreeleela) ಹವಾ ಕಮ್ಮಿಯಾದ್ಮೇಲೆ ಕೃತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಕರಾವಳಿ ಬ್ಯೂಟಿ ಗೆಲ್ತಾರಾ? ಕಾದುನೋಡಬೇಕಿದೆ.