Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ: ಕೃಷ್ಣಬೈರೇಗೌಡ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ: ಕೃಷ್ಣಬೈರೇಗೌಡ

Bengaluru City

ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ: ಕೃಷ್ಣಬೈರೇಗೌಡ

Public TV
Last updated: March 26, 2019 2:37 pm
Public TV
Share
2 Min Read
krishna byregowda
SHARE

ಬೆಂಗಳೂರು: ತೇಜಸ್ವಿನಿಯಂತಹ ಸುಸಂಸ್ಕೃತರಿಗೆ ಟಿಕೆಟ್ ಕೊಡದೇ ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ ಎಂದು ಬೆಂಗಳೂರು ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಹೇಳಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಅಭ್ಯರ್ಥಿ ಆಗುತ್ತಾರೆ ಎಂದು ನಾವು ಅಂದುಕೊಂಡಿದ್ದೇವು. ಏಕೆಂದರೆ ಈ ರಾಜ್ಯದಲ್ಲಿ ಅನಂತಕುಮಾರ್ ಅವರ ಕೊಡುಗೆ ಇದೆ. ಅನಂತಕುಮಾರ್ ಹಿರಿಯ ನಾಯಕರು. ಅವರು ಸದಾಕಾಲ ದೆಹಲಿಯಲ್ಲಿ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ತೇಜಸ್ವಿನಿ ಅವರು ಕೂಡ ಸಾರ್ವಜನಿಕ ಜೀವನದಲ್ಲಿ ಸಂಘ – ಸಂಸ್ಥೆ ಮುಖಾಂತರ, ಕಾಲೇಜಿನ ಮುಖಾಂತರ ಬಹಳ ಆಳವಾಗಿ ತೊಡಗಿಸಿಕೊಂಡವರು. ಅವರಿಗೆ ಟಿಕೆಟ್ ಸಿಗುತ್ತೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ ಎಂದರು.

Tejaswini Ananth Kumar

ಈಗ ಅವರಂತಹ ಒಳ್ಳೆಯ ಹಿನ್ನೆಲೆ ಇರುವವರನ್ನು ಬಿಟ್ಟು ಎಲ್ಲೋ ಒಂದು ಕಡೆ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತನೆ ಮಾಡುವಂತ ಅಭ್ಯರ್ಥಿಗೆ ಸುಸಂಸಂಸ್ಕೃವಾದ ಬೆಂಗಳೂರು ದಕ್ಷಿಣವನ್ನು ನೀಡಲಾಗಿದೆ. ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣದಲ್ಲಿ ಕೊಟ್ಟಿರುವುದು ಆ ಭಾಗದ ಜನತೆಗೆ ಇಷ್ಟವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಬೆಂಗಳೂರಲ್ಲಿ 4 ಕ್ಷೇತ್ರ ಇದೆ. ಕೇಂದ್ರ, ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಈ 4 ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಗೆಲ್ಲುವ ವಾತಾವಾರಣ ಕಂಡು ಬರುತ್ತಿದೆ ಎಂದರು.

TEJASWI

ಕಠಿಣವಾಗಿರುವ ಬೆಂಗಳೂರು ದಕ್ಷಿಣದಲ್ಲೂ ಸಹ ಕಾಂಗ್ರೆಸ್ ಗೆಲ್ಲಬಹುದು ಎಂಬ ಬದಲಾವಣೆ ಸಹ ಸೋಮವಾರದಿಂದ ಕಾಣಿಸುತ್ತಿದೆ. ಬೆಂಗಳೂರು ದಕ್ಷಿಣದಲ್ಲಿ ಬೆಜೆಪಿ ಆಯ್ಕೆ ಮಾಡಿದ ಅಭ್ಯರ್ಥಿ ಹಿನ್ನೆಲೆಯಲ್ಲಿ ನಾವು ನಾಲ್ಕು ಸ್ಥಾನ ಗೆಲ್ಲುವ ಅವಕಾಶ ಹೊಂದಿದ್ದೇವೆ. ನಮ್ಮ ಪಕ್ಷದ ವರಿಷ್ಠರು, ಜೆಡಿಎಸ್ ಪಕ್ಷದ ವರಿಷ್ಠರು, ನಮ್ಮ ಕ್ಷೇತ್ರದ ಶಾಸಕರು ನೀವೇ ಅಭ್ಯರ್ಥಿ ಆಗಬೇಕೆಂದು ಹೇಳಿದ್ದರು. ಅವರ ಭಾವನೆಗೆ ಬೆಲೆ ಕೊಟ್ಟು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.

tejasvi surya

ನಾನು ಈ ಬಾರಿ ಸಚಿವನಾಗಬೇಕು ಎಂದು ಬಯಸಿರಲಿಲ್ಲ. ಆದರೂ ಪಕ್ಷ ನನ್ನನ್ನು ಸಚಿವರಾಗಿ ಆಯ್ಕೆ ಮಾಡಿತ್ತು. ಭಾರತದ ಸಂಸತ್‍ನಲ್ಲಿ ಒಬ್ಬ ಸದಸ್ಯನಾಗಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕರೆ ನನ್ನ ಪಾಲಿಗೆ ದೊಡ್ಡ ಗೌರವ. ಜನರು ಆಶಿರ್ವಾದ ಮಾಡಿದರೆ ನಾನು ಅದನ್ನು ಸ್ವೀಕರಿಸುತ್ತೇನೆ. ಅದನ್ನು ಬಿಟ್ಟು ಮಂತ್ರಿ ಸ್ಥಾನ ಬಿಟ್ಟು ಹೋಗಬೇಕೆಂಬ ಅನಿವಾರ್ಯ ಆ ಆಲೋಚನೆ ನನಗಿಲ್ಲ. ಭಾರತದ ಸಂಸತ್ ನಮ್ಮ ದೇಶದ ಧ್ವನಿ ಅದು. ಅಂತಹದರಲ್ಲಿ ನಾನು ಒಬ್ಬ ಸದಸ್ಯನಾಗುವ ಅವಕಾಶ ಸಿಕ್ಕರೆ ನನ್ನ ಜೀವನದಲ್ಲಿ ಒಂದು ದೊಡ್ಡ ಹೆಜ್ಜೆ. ಇದರಿಂದ ನನ್ನ ಜೀವನ ಸಾರ್ಥಕ ಆಗುತ್ತದೆ ಎಂದರು.

ರಾಷ್ಟ್ರಮಟ್ಟದಲ್ಲಿ ಯಾರೇ ಬೆಳೆಯುತ್ತಿರುವ ಒಬ್ಬ ಸಾರ್ವಜನಿಕ ಜೀವನದ ಪ್ರತಿನಿಧಿಗೆ ರಾಷ್ಟ್ರಮಟ್ಟದ ಅನುಭವ ಸಿಕ್ಕರೆ ನಾವು ಇನ್ನು ಒಳ್ಳೆಯ ನಾಯಕರಾಗಿ ಬೆಳೆಯವ ಅನುಕೂಲ ಆಗಲಿದೆ. ನಾಳೆ ನಾವು ರಾಜ್ಯ ರಾಜಕಾರಣ ಮಾಡಬಹುದು. ಆದರೆ ನಾವು ದೆಹಲಿಯಲ್ಲಿ ಆ ಅನುಭವ ಪಡೆದರೆ ಇಡೀ ದೇಶದ ಸಮಗ್ರ ದೃಷ್ಟಿ ಭಾರತ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತದೆ. ಒಂದೊಂದು ರಾಜ್ಯ, ಒಂದೊಂದು ಸಂಸ್ಕೃತಿ, ಒಂದೊಂದು ಭಾಷೆ, ಅವರ ವಿಚಾರ ಭಾವವನ್ನು ಅರ್ಥ ಮಾಡಿಕೊಂಡಿದರೆ, ನಮ್ಮ ವ್ಯಕ್ತಿತ್ವ ಸುಧಾರಣೆ ಆಗುತ್ತದೆ ಎಂದು ತಿಳಿಸಿದರು.

TAGGED:bengalurukrishna byre gowdaLokSabha electionPublic TVTejasvi SuryaTejaswini AnanthKumarಕೃಷ್ಣಬೈರೇಗೌಡತೇಜಸ್ವಿ ಸೂರ್ಯತೇಜಸ್ವಿನಿ ಅನಂತಕುಮಾರ್ಪಬ್ಲಿಕ್ ಟಿವಿಬೆಂಗಳೂರುಲೋಕಸಭಾ ಚುನಾವಣೆ
Share This Article
Facebook Whatsapp Whatsapp Telegram

Cinema news

Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories
Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories
Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories

You Might Also Like

Karnataka grants Rs 10 crore to Wayanad landslide victims BJP JDS slams congress govt
Bengaluru City

ವಯನಾಡು ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕದಿಂದ ಮತ್ತೆ 10 ಕೋಟಿ ಅನುದಾನ – ಬಿಜೆಪಿ, ಜೆಡಿಎಸ್‌ ಆಕ್ರೋಶ

Public TV
By Public TV
26 minutes ago
Chinnaswamy Stadium
Bengaluru City

ಇನ್ಮುಂದೆ ಚಿನ್ನಸ್ವಾಮಿಯಲ್ಲಿ ನಡೆಯುವ ಎಲ್ಲಾ ಪಂದ್ಯಗಳಲ್ಲಿಯೂ ಮೃತರ ನೆನಪಿಗೆ 11 ಸೀಟ್ ಮೀಸಲು

Public TV
By Public TV
1 hour ago
Mojtaba Khamenei
Latest

ಅಮೆರಿಕದ ಜೊತೆ ಶಾಂತಿ ಮಾತುಕತೆಗೆ ಒಪ್ಪಿಕೊಂಡ ಮೊಜ್ತಬಾ ಖಮೇನಿ

Public TV
By Public TV
1 hour ago
trump in share market inside trade
Latest

ಟ್ರಂಪ್‌ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್‌ – ಇನ್‌ಸೈಡರ್‌ ಟ್ರೇಡಿಂಗ್‌ ಮಾಡಿದ್ಯಾರು?

Public TV
By Public TV
2 hours ago
Air Canada Express Crew
Latest

Air Canada Plane Crash | 330 ಅಡಿ ದೂರಕ್ಕೆ ಬಿದ್ದರೂ ಉಳಿದ ಸಿಬ್ಬಂದಿ – ಸೀಟಿನಲ್ಲಿ ಸಿಲುಕಿ ಅದೃಷ್ಟವಶಾತ್ ಪಾರು

Public TV
By Public TV
3 hours ago
Asim Munir Shehbaz Sharif Donald Trump
Latest

ಪಾಕಿಸ್ತಾನದಲ್ಲಿ ಅಮೆರಿಕ, ಇರಾನ್‌ ಶಾಂತಿ ಮಾತುಕತೆ?

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?