ಬೆಂಗಳೂರು: ಕೆಪಿಎಸ್‌ಸಿಯಲ್ಲಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ಗೆ ಸಿಐಡಿ ನೋಟಿಸ್ ನೀಡಿದೆ.
ತಲೆಮರೆಸಿಕೊಂಡಿರುವ ಅಧಿಕಾರಿ ಹಿಂದೆ ಬಿದ್ದಿರುವ ಸಿಐಡಿ, ಗುರುವಾರ ವಿಚಾರಣೆಗೆ ಹಾಜರಾಗುವಂತೆ ವಾಟ್ಸಪ್ ಮೂಲಕ ಸಿಐಡಿ ನೋಟಿಸ್ ರವಾನೆ ಮಾಡಿದೆ.
ನೋಟಿಸ್ ನೀಡಿ ಖುದ್ದು ಹಾಜರಿಗೆ ಸಿಐಡಿ ಸೂಚಿಸಿದೆ. ಅಲ್ಲದೇ, ಖುದ್ದು ಮನೆಗೂ ಹೋಗಿ ಅಧಿಕಾರಿಗಳು ನೋಟಿಸ್ ತಲುಪಿಸಿ ಬಂದಿದ್ದಾರೆ. ಜಯಮಹಲ್‌ನಲ್ಲಿರುವ ಗ್ಯಾನೇಂದ್ರ ಮನೆಗೆ ಹೋಗಿ ಅಧಿಕಾರಿಗಳು ನೋಟಿಸ್ ಕೊಟ್ಟು ಬಂದಿದ್ದಾರೆ.
