ಬೆಂಗಳೂರು: ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಅವರ ಅಜ್ಜಿ ನಿಂಗಮ್ಮ ಅವರು ಕನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿವ ಜಾವ ನಿಧನರಾಗಿದ್ದಾರೆ.
ನಿಂಗಮ್ಮ ಅವರಿಗೆ (106) ವರ್ಷಗಳಾಗಿದ್ದು, ಅವರ ಅಂತ್ಯಕ್ರಿಯೆ ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಶುಕ್ರವಾರ ಸಂಜೆ 4.30ಕ್ಕೆ ನಡೆಯಲಿದೆ. ಸದ್ಯ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರದ ಕಲಾಪದಲ್ಲಿ ಭಾಗವಹಿಸುವುದನ್ನು ಮೊಟಕುಗೊಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ 150 ಹಂದಿಗಳ ಸಜೀವ ದಹನ ಮಾಡಿದ ದುಷ್ಕರ್ಮಿಗಳು!
ಕೂಡಲೇ ಬೆಳಗಾವಿಯಿಂದ 12 ಗಂಟೆ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ನಂತರ ಅಲ್ಲಿಂದ ದೊಡ್ಡಾಲಹಳ್ಳಿಗೆ ತೆರಳಿ, ಅಜ್ಜಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಸ್ನೇಹ ಮಾಡಿದ್ದ ವಂಚಕ ಸುಕೇಶ್