ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇ.ಡಿ) ವಂಚಕ ಸುಕೇಶ್ ಚಂದ್ರಶೇಖರ್ ಅವರ ಮುಖವಾಡಗಳನ್ನು ಒಂದೊಂದಾಗಿಯೇ ಬಯಲಿಗೆಳೆಯುತ್ತಿದೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರಿಂದ ಇ.ಡಿ ಈ ವರ್ಷ ಎರಡು ಬಾರಿ ಹೇಳಿಕೆ ದಾಖಲಿಸಿಕೊಂಡಿತ್ತು. ಅ ಸಂದರ್ಭದಲ್ಲಿ ಅವರು ಸುಕೇಶ್ ಚಂದ್ರಶೇಖರ್ ತನ್ನನ್ನು ಶೇಖಾರ್ ರತ್ನ ವೇಲ ಎಂದು ಪರಿಚಯಿಸಿಕೊಂಡಿದ್ದಾಗಿ ತಿಳಿಸಿದ್ದರು. ಅಲ್ಲದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ರಾಜಕೀಯ ಕುಟುಂಬದಿಂದ ಬಂದವನು ಎಂದು ಹೇಳಿಕೊಂಡಿದ್ದ. ಆತ, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸ್ನೇಹ ಬಳಸಲು ಅಮಿತ್ ಶಾ ಅವರ ಕಚೇರಿ ಸಂಖ್ಯೆಯನ್ನೇ ಹೋಲುವಂತಹ ಸಂಖ್ಯೆಯಿಂದ ವಂಚನೆಯ ಕರೆಗಳನ್ನು ಮಾಡುತ್ತಿದ್ದ ಎಂದು ಇ.ಡಿ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್
Advertisement
Advertisement
ವಂಚಕ ತನ್ನೊಂದಿಗೆ ಸನ್ ಟಿವಿ ಮಾಲೀಕ ಎಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ತಾನು ಜಯಲಲಿಲತಾ ಅವರ ರಾಜಕೀಯ ಕುಟುಂಬದವನಾಗಿದ್ದು, ಚೈನೈ ಮೂಲದವನಾಗಿರುವುದಾಗಿ ಹೇಳಿಕೊಂಡಿದ್ದು ತನಗೆ ಅಮಿತ್ ಶಾ ಅವರ ಕಚೇರಿಯಿಂದ ಫೋನ್ ಕರೆ ಬಂದಿದ್ದಾಗಿ ಮೇಕಪ್ ಕಲಾವಿದ ತಿಳಿಸಿದ್ದಾರೆ. ಈ ಫೋನ್ ಸಂಖ್ಯೆ ಗೃಹ ಸಚಿವಾಲಯದ ಫೋನ್ ನಂಬರ್‌ಗೆ ಹೋಲುತ್ತಿದ್ದರಿಂದ ಅವರು ಅದನ್ನು ನಂಬಿ ಸುಕೇಶ್‌ನ ಮೊಬೈಲ್ ಸಂಖ್ಯೆಯನ್ನು ಜಾಕ್ವೆಲಿನ್ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ
Advertisement
Advertisement
ಫೆಬ್ರವರಿಯಿಂದ ಆಗಸ್ಟ್ 7 ರಂದು ಸುಕೇಶ್‌ನ ಬಂಧನವಾಗುವ ತನಕವೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‌ಗೆ ದುಬಾರಿ ಕೈ ಚೀಲಗಳು, ಪರ್ಷಿಯನ್ ಬೆಕ್ಕು (9 ಲಕ್ಷ ಮೌಲ್ಯ), ಬ್ರೇಸ್‌ಲೇಟ್‌ಗಳು ಉಡುಗೊರೆಯಾಗಿ ಸಿಕ್ಕಿದ್ದವು. ಅದಲ್ಲದೇ ಒಂದು ಬಿಎಂಡಬ್ಲೂ ಕಾರನ್ನು ಅಮೆರಿಕಾದಲ್ಲಿರುವ ಜಾಕ್ವೆಲಿನ್ ತಂಗಿ ಗೆರಾಲ್ಡಿನ್ ಫೆರ್ನಾಂಡಿಸ್‌ಗೆ ಉಡುಗೊರೆಯಾಗಿ ನೀಡಿರುವುದಾಗಿ ಇ.ಡಿ ತಿಳಿಸಿದೆ.