ಉಡುಪಿ: ಸಿ.ಪಿ.ಯೋಗೇಶ್ವರ್ (C.P.Yogeshwar) ನಮ್ಮನ್ನು ಬಿಡುವುದಿಲ್ಲ ಎನ್ನುವ ವಿಶ್ವಾಸವಿತ್ತು ಎಂದು ಸಿಪಿವೈ ಕಾಂಗ್ರೆಸ್ ಸೇರಿದ್ದಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಬೇಸರ ವ್ಯಕ್ತಪಡಿಸಿದರು.
ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಯೋಗೀಶ್ವರ್ ನಮ್ಮನ್ನು ಬಿಡುವುದಿಲ್ಲ ಎನ್ನುವ ವಿಶ್ವಾಸವಿತ್ತು. ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಬೇಕು ಅನ್ನೋದು ನಮ್ಮ ವಿಚಾರ. ಚನ್ನಪಟ್ಟಣದಲ್ಲಿ ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ನಾಟಕ ಫ್ರಾಡ್‌ಗಳ ಸಂತೆಯಾಗಲು ಸಿದ್ದರಾಮಯ್ಯ ಕಾರಣ – ಹೆಚ್. ವಿಶ್ವನಾಥ್ ಲೇವಡಿ
ರಾಜಕಾರಣದಲ್ಲಿ ಈ ರೀತಿಯ ತರ್ಕಗಳು, ಚರ್ಚೆಗಳು ಬೆಳವಣಿಗೆಗಳು ಆಗುವುದು ಸಹಜ. ಒಟ್ಟು ಚುನಾವಣೆ ಸುಖಾಂತ್ಯವಾಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಎನ್‌ಡಿಎ ಇಂದ ಯಾರನ್ನು ನಿಲ್ಲಿಸಬೇಕು ಅನ್ನೋದನ್ನ ಪಕ್ಷ ತೀರ್ಮಾನ ಮಾಡುತ್ತದೆ. ನಮಗಿಂತ ದೊಡ್ಡವರು ಎಲ್ಲಾ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವೇನಿಲ್ಲ – ನಿಖಿಲ್ ಕುಮಾರಸ್ವಾಮಿ