ಕಾರವಾರ: RSS ಸಂಘಟನೆಗೆಂದೇ ನಾವು ಅವಕಾಶ ಕೊಟ್ಟಿಲ್ಲ, ದೇಶ ಮೊದಲು ಎನ್ನುವ ಯಾವುದೇ ಸಂಸ್ಥೆಯಾದರೂ ಅವಕಾಶ ಕೊಡುತ್ತೇವೆ. ಇದು ಮೊದಲಿನಿಂದಲೂ ವಾಡಿಕೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Shrinivas Poojari) ತಿಳಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್‌ಎಸ್‌ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ವಸತಿ ಶಾಲೆಯಲ್ಲಿ RSSಗೆ ಅನುಮತಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಕಾರವಾರದಲ್ಲಿ ಮಾತನಾಡಿದ ಅವರು, ದಸರಾ ರಜೆ ಸಮಯದಲ್ಲಿ ರಾಜ್ಯದ ಎಲ್ಲ ಶಾಲೆಗಳಿಗೆ ರಜೆ ಕೊಡುತ್ತೇವೆ. ರಜೆ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ NSS ಸೇರಿದಂತೆ ಎಲ್ಲರೂ ಕೂಡ ಅನುಮತಿ ಕೇಳುತ್ತಾರೆ ಎಂದರು. ಇದನ್ನೂ ಓದಿ: ಮೂರು ಮಕ್ಕಳೊಂದಿಗೆ ಕರ್ನಾಟಕದ ಮಹಿಳೆ ಶವ ಮಹಾರಾಷ್ಟ್ರದ ಕೆರೆಯಲ್ಲಿ ಪತ್ತೆ
Advertisement
ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಯಾವುದೇ ಉತ್ತಮ ಸಂದೇಶ ಕೊಡುವ, ಯಾವುದೇ ಸಂಸ್ಥೆಗಳಿದ್ದರೂ ಅನುಮತಿ ಕೊಡುತ್ತೇವೆ. ನಿಷೇಧಿತ ಯಾವುದೇ ಸಂಸ್ಥೆಗಳಿಗೆ ಅನುಮತಿ ನೀಡುವುದಿಲ್ಲ. ಆದರೆ ದೇಶ ಮೊದಲು ಅನ್ನೊ ಯಾವುದೇ ಸಂಸ್ಥೆಗೆ ಅವಕಾಶ ಕೊಡುತ್ತೇವೆ. ಇದು ಮೊದಲಿನಿಂದಲೂ ವಾಡಿಕೆ. ಈ ಹಿನ್ನೆಲೆಯಲ್ಲಿ ಅವಕಾಶ ಕೊಟ್ಟಿದ್ದೇವೆಯೇ ಹೊರತು RSSಗೆಂದು ನಾವು ಅವಕಾಶ ಕೊಟ್ಟಿಲ್ಲ. ಟೀಕೆ ಮಾಡುವವರು ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಟೀಕೆ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಲ್ಡಿಂಗ್ ಕುಸಿದು ಇಬ್ಬರ ಸಾವು