ಬೆಂಗಳೂರು: ಸರ್ಕಾರ ಕರ್ನಾಟಕದ್ದು.. ರೂಲ್ ಕೇರಳದ್ದಾ..!? ಕೋಗಿಲು ಲೇಔಟ್ (Kogilu layout Demolition) ಅಕ್ರಮದಲ್ಲಿ ಕೇರಳ ಹಸ್ತಕ್ಷೇಪಕ್ಕೆ ಬಿಜೆಪಿ ಮುಗಿಬಿದ್ದಿದೆ. ವೇಣುಗೋಪಾಲ್ ಮಧ್ಯಪ್ರವೇಶದಿಂದ ರಾಜ್ಯ ಸರ್ಕಾರ ಥಂಡಾ ಹೊಡೆದಿದೆ. ರಾಜ್ಯ ಸರ್ಕಾರ ಮಾತ್ರ ಅಕ್ರಮ ನಿಜ.. ಆದರೆ ಪುನರ್ವಸತಿ ಕಲ್ಪಿಸುತ್ತೇವೆ ಅಂತಾ ಹೊಸ ರಾಗ ತೆಗೆದಿದೆ. ಹಾಗಾದ್ರೆ ಅಕ್ರಮದಾರರಿಗೆಲ್ಲರಿಗೂ ಪುನರ್ವಸತಿ ಭಾಗ್ಯನಾ..!? ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ.
ಆನೆ ತುಳಿದು ಸತ್ತರೂ ಪರಿಹಾರ.. ಮನೆ ಕುಸಿತಕ್ಕೂ ಸೂರು ವ್ಯವಸ್ಥೆ.. ಮಾತೆತ್ತಿದ್ರೆ ಮಾನವೀಯತೆಯ ಅಸ್ತ್ರ..! ಕೇರಳದಲ್ಲಿ (Kerala) ಏನೇ ಆದರೂ ಕರ್ನಾಟಕ ಹೆಲ್ಪ್ ಮಾಡಬೇಕು.. ಕೇರಳದವರೂ ಏನೇ ಹೇಳಿದರೂ ಅದಕ್ಕೆ ಪರಿಹಾರ ಕೊಡಬೇಕು. ಈಗ ಅಕ್ರಮದಾರರಿಗೆ ಪರ್ಯಾಯ ಸೂರಿನ ಭಾಗ್ಯ. ಇದು ಕರ್ನಾಟಕ ಸರ್ಕಾರದ ಸಕಲ ವ್ಯವಸ್ಥೆಯ ಪರಿ. ಯೆಸ್, ಕೋಗಿಲು ಲೇಔಟ್ ಅಕ್ರಮಕ್ಕೆ ಬೈಯ್ಯಪ್ಪನಹಳ್ಳಿಯಲ್ಲಿ (Baiyyappanahalli) ಪುನರ್ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಒಂಟಿ ಮನೆ ಸ್ಕೀಂ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಅರ್ಹರಿಗೆ ಪುನರ್ವಸತಿ ಕಲ್ಪಿಸಲು ಪ್ಲ್ಯಾನ್ ಮಾಡಿದೆ. ಯಾವಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧ್ಯಪ್ರವೇಶ ಮಾಡಿದ್ರೋ ಆಗಲೇ ರಾಜ್ಯ ಸರ್ಕಾರ ಆಲರ್ಟ್ ಆಗಿದೆ. ಅಕ್ರಮ ಎಂದು ತೆರವು ನಡೆಸಿದ ಸರ್ಕಾರವೇ, ಅದೇ ಅಕ್ರಮದಾರರಿಗೆ ಅರ್ಹರ ಹೆಸರಿನಲ್ಲಿ ಪರ್ಯಾಯ ಸೂರಿನ ವ್ಯವಸ್ಥೆಗೆ ಸಿದ್ಧತೆ ನಡೆಸಿದೆ. ನಿನ್ನೆ ಜಮೀರ್, ಇವತ್ತು ಡಿಸಿಎಂ ಸ್ಪಾಟ್ ವಿಸಿಟ್ ಮಾಡಿದ್ದಾರೆ. ಇಬ್ಬರು ಸಿಎಂಗೆ ವರದಿ ಸಲ್ಲಿಸಲಿದ್ರು. ಸಿಎಂ ಸಿದ್ದರಾಮಯ್ಯ (Siddaramaiah) ಕಾವೇರಿ ನಿವಾಸದಲ್ಲಿ ಸಭೆ ನಡೆಸಿ ಆರ್ಹರಿಗೆ ಪುನರ್ವಸತಿ ಎಂದು ಘೋಷಣೆ ಮಾಡಿದ್ರು. ಇದನ್ನೂ ಓದಿ: Kogilu layout Demolition | ಅರ್ಹರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೀರ್ಮಾನ: ಸಿದ್ದರಾಮಯ್ಯ
ಇನ್ನು ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ವ್ಯಾಪಕ ಆಕ್ರೋಶ ಹೊರಹಾಕಿದೆ. ಅಕ್ರಮದಾರರಿಗೆ ಪುನರ್ವಸತಿ ಭಾಗ್ಯ ಹೇಗೆ ಕೊಡ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಪಿಣರಾಯ್ ವಿಜಯನ್ ಕರ್ನಾಟಕ ಸರ್ಕಾರವನ್ನ ನಡೆಸಲಿ, ಬಿಟ್ಟು ಬಿಡಿ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ರೆ, ವೇಣುಗೋಪಾಲ್ ಹಸ್ತಕ್ಷೇಪಕ್ಕೆ ವಿರೋಧ ಪಕ್ಷದ ನಾಯಕ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಮಾನವನ್ನ ದೇಶದ ಮುಂದೆ ಹರಾಜು ಹಾಕಿದ್ದು, ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಅಂತಾ ಅಶೋಕ್ ಆಗ್ರಹಿಸಿದ್ದಾರೆ.
ಒಟ್ನಲ್ಲಿ ಅಕ್ರಮ ಎಂದು ಸರ್ಕಾರವೇ ಒತ್ತುವರಿ ಕಾರ್ಯಾಚರಣೆ ಮಾಡಿ, ಅದೇ ಜನರಿಗೆ ಈಗ ಪುನರ್ವಸತಿ ಕಲ್ಪಿಸುತ್ತಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಕೇರಳ ಚುನಾವಣಾ ರಾಜಕಾರಣದ ಮೇಲಾಟಕ್ಕೆ ರಾಜ್ಯ ಸರ್ಕಾರ ಶರಣಾಯ್ತಾ..!? ಹೈಕಮಾಂಡ್ ಮೆಚ್ಚಿಸಲು ರಾಜ್ಯದ ಸೂಪರ್ ಪವರ್ ಬಲಿ ಕೊಡ್ತಿದ್ಯಾ..? ಎಂಬ ಪ್ರಶ್ನೆಗಳಿಗೆ ಸಿಎಂ, ಡಿಸಿಎಂ ಉತ್ತರಿಸಬೇಕಿದೆ. ಇದನ್ನೂ ಓದಿ: ನಮ್ಮ ಗೃಹ ಇಲಾಖೆ ಸತ್ತು ಹೋಗಿದ್ಯಾ? ಇದೆಂಥಾ ಗುಲಾಮಗಿರಿ ಸರ್ಕಾರ? – ಛಲವಾದಿ ನಾರಾಯಣಸ್ವಾಮಿ ನಿಗಿನಿಗಿ

