ಬೀದರ್: ಪಂಚರಾಜ್ಯಗಳಲ್ಲಿ ಬಂದಿರುವ ಫಲಿತಾಂಶವನ್ನು ನಾವು ಗೌರವಿಸುತ್ತೇವೆ. ಆದರೆ ಕೇಂದ್ರ ಸರ್ಕಾರ ಮಾಡಿದ ತಪ್ಪಿಗೆ ಪಂಜಾಬ್ ರೈತರು ತಿರುಗೇಟು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಟಾಂಗ್ ನೀಡಿದರು.
ಬೀದರ್‍ನ ಗಾಂಧಿಗಂಜ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಯಾಗಿದೆ. ಆದರೂ ಬಿದ್ದೋರಿಗೆ ಮೂಗು ಮಣ್ಣಾಗಿಲ್ಲಾ ಅನ್ನೋದೆ ಉದಾಹರಣೆಯಾಗಬಾರದು ಎಂದು ವ್ಯಂಗ್ಯವಾಡಿದರು.
Advertisement
Advertisement
ಪಂಜಾಬ್ ಅನ್ನು ನಾವು ಮಾಡೆಲ್ ಆಗಿ ತೆಗೆದುಕೊಳ್ಳಲ್ಲಾ, 2023ಕ್ಕೆ ಕರ್ನಾಟಕವೇ ಒಂದು ಮಾಡೆಲ್ ಆಗುತ್ತದೆ. ಕರ್ನಾಟಕದ ಜನ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಇರತ್ತಾರೆ ಅಂದರೆ ಅದು ತಪ್ಪು. ಯಾಕೆಂದರೆ ಪಂಜಾಬ್ ಜನ ಒಂದು ಫಲಿತಾಂಶ ಕೊಟ್ಟಿದ್ದಾರೆ. ಅದಕ್ಕಿಂತಲೂ ಒಳ್ಳೆಯ ಫಲಿತಾಂಶ ಕೊಡಲು ಕರ್ನಾಟಕದ ರೈತರು ತೀರ್ಮಾನ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿ ಆಡಳಿತಕ್ಕೆ ಸಿಕ್ಕ ಜನಮನ್ನಣೆ: ಜಗದೀಶ್ ಶೆಟ್ಟರ್
Advertisement
Advertisement
ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ, ಇಲ್ಲದಿದ್ದರೆ ನಮ್ಮಗೂ ರಾಜಕೀಯ ಮಾಡೋಕೆ ಬರುತ್ತದೆ. ನಾವು ನಿಮಗೆ ರಾಜಕೀಯ ತೋರಿಸುತ್ತೇವೆ. ಭೂಸ್ವಾಧೀನ ಕಾಯ್ದೆ ಸೇರಿದಂತೆ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ 28ರಂದು ಬೆಂಗಳೂರಿನಲ್ಲಿ ಬೃಹತ್ ರೈತರ ಸಮಾವೇಶ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಗೋವಾದಲ್ಲಿ ಅತಂತ್ರ ಫಲಿತಾಂಶ – ಕುದುರೆ ವ್ಯಾಪಾರಕ್ಕೆ ವೇದಿಕೆ ಸಜ್ಜು