ಮಡಿಕೇರಿ: ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಉಕ್ರೇನ್ ದೇಶ ನಲುಗಿ ಹೋಗುತ್ತಿದೆ. ಇತ್ತ ಕರ್ನಾಟಕದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ವಿದ್ಯಾರ್ಥಿಗಳು ಈ ದಾಳಿಯಿಂದ ಮತ್ತೆ ದೇಶಕ್ಕೆ ಮರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಂತೆ ಕೊಡಗು ಜಿಲ್ಲೆಯ ಸುಮಾರು 10 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ಜಿಲ್ಲಾಡಳಿತ ನಡೆಸುತ್ತಿದೆ.
Advertisement
ಈ ಕುರಿತು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಪಬ್ಲಿಕ್ ಟಿವಿ ಗೆ ಸ್ಪಷ್ಟನೆ ನೀಡಿದ್ದಾರೆ. ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿದ ಅವರು, ಈಗಾಗಲೇ ಉಕ್ರೇನ್ ನಲ್ಲಿ ಜಿಲ್ಲೆಯ ಇಬ್ಬರು ಹುಡುಗರು, 8 ಹುಡುಗಿಯರು ಸಿಲುಕಿದ್ದಾರೆ. ಅವರೆಲ್ಲರು ಪೆÇೀಷಕರನ್ನು ಮತ್ತು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು
Advertisement
ಅಷ್ಟು ವಿದ್ಯಾರ್ಥಿಗಳನ್ನು ಭಾರತೀಯ ರಾಯಭಾರಿ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಎಲ್ಲರೂ ಬಂಕರ್‍ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
Advertisement
Advertisement
ಕೊಡಗಿನ 10 ವಿದ್ಯಾರ್ಥಿಗಳು ಹೆಸರು ಈ ಕೆಳಗಿನಂತಿವೆ:
1)ಅಶ್ವಿನ್ ಕುಮಾರ್ – ಕೊಡಗು
2)ಚಂದನ್ ಗೌಡ – ಕುಶಾಲನಗರ
3)ಅಲಿಶಾ ಸೈಯದ್ – ಕೊಡಗು
4)ಲಿಖೀತ್ – ಕುಶಾಲನಗರ
5)ಅಕ್ಷಿತಾ ಅಕ್ಕಮ್ಮ – ಕುಶಾಲನಗರ
6)ಎಂ.ಪಿ.ನಿರ್ಮಲಾ – ಅಮ್ಮತ್ತಿ ವಿರಾಜಪೇಟೆ ತಾಲೂಕು
7)ಅರ್ಜುನ್ ವಸಂತ್- ಶಾನಿವಾರಸಂತೆ
8)ಸಿನಿಯಾ.ವಿ.ಜೆ – ಪೋನ್ನಂಪೇಟೆ
9)ತೇಜಸ್ವಿನಿ – ವಿರಾಜಪೇಟೆ
10)ಶೀತಲ್ – ಸಂಪತ್ – ಗೋಣಿಕೋಪ್ಪ