ಬೀದರ್: ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್‍ಗೆ ಹೋಗಿದ್ದ ಬೀದರ್ ಮೂಲದ ಮತ್ತಿಬ್ಬರು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದು, ಇತ್ತ ಅವರ ಪೋಷಕರು, ತಂಗಿ ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
Advertisement
ಬೀದರ್ ನಗರದ ದೀಕ್ಷಿತ್ ಕಾಲೋನಿಯ ಶಶಾಂಕ್ ವಿಜಯ್ ಕುಮಾರ್ ಪೋಷಕರು ಮಗ ಪಾರಾಗಿ ಮನೆಗೆ ಬರಲಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೀದರ್‍ನ ಒಟ್ಟು ನಾಲ್ಕು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿನಿ ಹೆತ್ತವರಿಗೆ ಧೈರ್ಯ ತುಂಬಿದ ಎಸ್‍ಪಿ
Advertisement
ಉಕ್ರೇನ್ ನಲ್ಲಿ ಯುದ್ಧ ನಡೆಯುತ್ತಿದ್ದು, ಅದು ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಹೀಗಾಗೀ ನಾವು ಆತಂಕ ಪಡುತ್ತಿದ್ದೇವೆ. ನಾವು ನನ್ನ ಮಗನ ಜೊತೆ ಫೋನ್‍ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್ಗೆ ಓಡಿ ಹೋಗಿದ್ದಾನೆ. ಇದನ್ನು ನೋಡಿ ನಮಗೆ ಭಯವಾಗುತ್ತಿದೆ. ಉಕ್ರೇನ್ ನ ಎಲ್ಲಕಡೆ ಭಯಾನಕ ಸ್ಥಿತಿ ಇದ್ದು, ಇದರಿಂದ ನಮ್ಮಗೆ ಬಹಳ ದುಃಖವಾಗುತ್ತಿದೆ. ನಮ್ಮ ಮಕ್ಕಳನ್ನು ಸೇಫಾಗಿ ಕರೆದುಕೊಂಡು ಬನ್ನಿ ಎಂದು ಭಾವುಕರಾದರು.
Advertisement
Advertisement
ಅಲ್ಲಿ ನಮ್ಮ ಅಣ್ಣನಿಗೆ ನೀರು, ಊಟ ಸೇರಿದಂತೆ ಬಹಳ ತೊಂದರೆಯಾಗುತ್ತಿದೆ. ನಾನು ಅವನನ್ನು ಬಹಳ ನೆನಪಿಸಿಕೊಳ್ಳುತ್ತಿದ್ದೇನೆ. ಹೀಗಾಗೀ ನಮ್ಮ ಅಣ್ಣ ಬೇಗ ಮನೆಗೆ ಬರಬೇಕು ಎಂದು ತಂಗಿ ಆತಂಕದಲ್ಲಿ ಕಣ್ಣೀರು ಹಾಕಿದರು. ಇದನ್ನೂ ಓದಿ: ಮತ್ತೆ ಕಂಗನಾಗೆ ಬಂತು ಕಂಟಕ – ‘ಲಾಕ್‍ಆಪ್’ ವಿರುದ್ಧ ಕಾಪಿರೈಟ್