ರಾಮನಗರ: ರಾಜ್ಯ ಮಾರುಕಟ್ಟೆಗೆ ಅಮುಲ್ ಲಗ್ಗೆ ಇಟ್ಟಿರುವ ವಿಚಾರವಾಗಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ (H.D.Kumaraswamy) ಬಿಡದಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಅಮುಲ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಶೋಭಾ ಕರಂದ್ಲಾಜೆ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ಕೆಎಂಎಫ್ ( Karnataka Milk Federation) ಮೇಲಾಗುವ ದಾಳಿ ಅರಿವಾಗುತ್ತಿಲ್ಲ. ಅವರಿಬ್ಬರೂ ಅದರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ರಾಜ್ಯ ನಾಯಕರು ಗುಜರಾತ್ (Gujarat) ನಾಯಕರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಜೋರಾದ ಕಾಂಗ್ರೆಸ್ ಟಿಕೆಟ್ ಫೈಟ್- ಸ್ಥಳೀಯರಿಗೆ ಮಣೆ ಹಾಕದಿದ್ದರೆ ಬಂಡಾಯದ ಎಚ್ಚರಿಕೆ
Advertisement
Advertisement
ದೇವೇಗೌಡರು (H.D.Deve Gowda) ಪ್ರಧಾನಿ ಆಗಿದ್ದಾಗ 13 ಒಕ್ಕೂಟಗಳು ಉತ್ತಮ ಸ್ಥಿತಿಯಲ್ಲಿದ್ದವು. ರೈತರ ಬದುಕಿಗೆ ಆಸರೆ ಆಗಿದ್ದವು. ಆದರೆ ಇಂದು ಹಂತ ಹಂತವಾಗಿ ಕೆಎಂಎಫ್ ಮೇಲೆ ದಾಳಿ ಮಾಡಲು ಹೊರಟಿದ್ದಾರೆ. ಅದರ ನಷ್ಟ ಏನು ಎಂಬುದು ಇವರಿಗೆ ಅರ್ಥ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಕೆಎಂಎಫ್‍ನ ಎಂ.ಡಿ ದುಡ್ಡು ಹೊಡೆಯಲು ಶುರು ಮಾಡಿದ್ದಾರೆ. ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಲು ಹೊರಟಿದ್ದಾರೆ. ಇದನ್ನ ಬೇಗ ಸರಿಪಡಿಸಿಕೊಳ್ಳಬೇಕು. ಕೆಎಂಎಫ್ ಕಷ್ಟದಲ್ಲಿ ಕಟ್ಟಿರುವ ಸಂಸ್ಥೆ. ಇದರಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ. ರೈತರ ಬದುಕಿನ ವಿಷಯದಲ್ಲಿ ಚೆಲ್ಲಾಟ ಆಡುತ್ತಿರುವುದನ್ನ ಪ್ರಶ್ನಿಸುತ್ತಿದ್ದೇವೆ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ್ದಾರೆ.
Advertisement
ಈಗ ಮೂರನೇ ಹಂತದಲ್ಲಿ ಕೆಎಂಎಫ್ ಮುಗಿಸುವ ಕಾರ್ಯ ನಡೆಯುತ್ತಿದೆ. ಕೆಎಂಎಫ್‍ನ ಅಧಿಕಾರಿಗಳೇ ಇದರಲ್ಲಿ ಭಾಗಿಯಾಗಿದ್ದಾರೆ. ಹಣ ದೋಚುವುದೊಂದೇ ಅವರ ಉದ್ದೇಶವಾಗಿದೆ. ನಂದಿನಿ ಅಮುಲ್‍ಗಿಂತ ಕಡಿಮೆ ಇಲ್ಲ. ಅಮುಲ್‍ನ್ನು ಹಿಂದಿಕ್ಕುವ ಶಕ್ತಿ ನಮ್ಮ ರೈತರಿಗಿದೆ ಎಂದು ಹೇಳಿದ್ದಾರೆ.
ಜೆಡಿಎಸ್ (JDS) ಎರಡನೇ ಪಟ್ಟಿ ಬಿಡುಗಡೆ ವಿಚಾರವಾಗಿ, ಸೋಮವಾರದ ನಂತರ ಪಟ್ಟಿ ಬಿಡುಗಡೆ ಮಾಡುತ್ತೇವೆ. ಈಗ ಸಾಕಷ್ಟು ಒತ್ತಡಗಳಿವೆ. ಕೆಲವು ಕಡೆ ಮತದಾರರು ನನಗೆ ಮತ ಹಾಕಲು ತಯಾರಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಆ ಕೊರತೆ ನೀಗಿಸುವ ಕೆಲಸ ನಡೆಯುತ್ತಿದೆ. ಇನ್ನೂ ರಾಷ್ಟ್ರೀಯ ಪಕ್ಷದ ಮೊದಲ ಪಟ್ಟಿಯೇ ಬಿಡುಗಡೆ ಆಗಿಲ್ಲ. ಈಗ ಹಲವಾರು ಪ್ರಮುಖರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುವುದು ಪ್ರಾರಂಭ ಆಗಿದೆ. ಕಾಂಗ್ರೆಸ್ಸಿನ ಹಲವಾರು ಜನ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುವ ಪ್ರಕ್ರಿಯೆ ಆರಂಭ ಆಗಿದೆ. ಕಾಂಗ್ರೆಸ್‍ನಲ್ಲಿ ಓವರ್ ಲೋಡ್ ಆಗಿ ನಮಗೆ ಶಕ್ತಿ ತುಂಬುವ ಕೆಲಸ ಆಗುತ್ತಿದೆ. 15ಕ್ಕೂ ಹೆಚ್ಚು ಸಮರ್ಥ ಅಭ್ಯರ್ಥಿಗಳು ಪಕ್ಷಕ್ಕೆ ಬರಲಿದ್ದಾರೆ. 120 ಸೀಟ್‍ಗೆ ಬೇಕಾದ ಅಭ್ಯರ್ಥಿಗಳು ಸೇರುವ ವಾತಾವರಣ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ.
ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಧಾನಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಿಹಾರಕ್ಕಾಗಿ ಬರುತ್ತಿದ್ದಾರೆ. ರಾಜ್ಯದ ಜನತೆಯ ವಿಹಾರ ಅವರಿಗೆ ಬೇಕಿಲ್ಲ. ರಾಜ್ಯದ ಜನರ ಕಷ್ಟಕ್ಕಾಗಿ ಬಂದಿಲ್ಲ. ಈಗ ಚುನಾವಣೆ ಕೆಲಸ ಮಾಡಿ ಸುಸ್ತಾಗಿದ್ದಾರೆ. ಅದಕ್ಕೆ ರೆಸ್ಟ್ ಮಾಡಲು ಬಂದಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಟಿಕೆಟ್‍ಗಾಗಿ ದೈವದ ಮೊರೆ ಹೋದ ಮಡಿಕೇರಿ ಆಕಾಂಕ್ಷಿ ಭರತೀಶ್