ಮಡಿಕೇರಿ: ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಬಿಜೆಪಿ (BJP) ಪಾಳಯದಲ್ಲಿ ಟಿಕೆಟ್‍ಗಾಗಿ ನಾನಾ ಕಸರತ್ತು ನಡೆಯುತ್ತಿದೆ. ಹಾಲಿ ಶಾಸಕರು ಹಾಗೂ ಹೊಸ ಮುಖಗಳು ಸಾಕಷ್ಟು ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ಯಾರಿಗೆ ಟಿಕೆಟ್ ನೀಡಿದರೆ ಆ ಕ್ಷೇತ್ರ ಪಕ್ಷದ ಪಾಲಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮಡಿಕೇರಿ (Madikeri) ಕ್ಷೇತ್ರದ ಪ್ರಬಲ ಆಕಾಂಕ್ಷಿಯೊಬ್ಬರು ರಾತ್ರಿ ವೇಳೆಯಲ್ಲಿ ದೈವದ (Daiva) ಮೊರೆ ಹೋಗಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಅಗಿರುವ ಬಿ.ಬಿ ಭರತೀಶ್ ಎಂಬವರು ಮಡಿಕೇರಿ ನಗರದ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ದೈವಾರಾಧಾನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ಒಂಭತ್ತು ಕೋಲಗಳ ಅರಾಧನೆ ನಡೆಯುವ ಸಂದರ್ಭದಲ್ಲಿ ಭರತೀಶ್ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ತಮಗೆ ಟಿಕೆಟ್ ದೊರೆಯುವಂತೆ ಹಾಗೂ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ- ಕಾಂತಾದೇವಿ ಛೋಪ್ರಾ ಕಣ್ಣೀರು
Advertisement
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತಾನಾಡಿ, ಇದೇ ಮೊದಲ ಬಾರಿಗೆ ಮುತ್ತಪ್ಪನ್ ದೇವಾಲಯಕ್ಕೆ ಬಂದಿದ್ದೇನೆ. ದೇವರ ಬಳಿ ಇಷ್ಟಾರ್ಥ ಈಡೇರುವಂತೆ, ಕೊಡಗಿನಲ್ಲಿ (Kodagu) ಪ್ರಕೃತಿ ವಿಕೋಪಗಳು ನಡೆಯದೆ ಇರಲಿ ಹಾಗೂ ನಾಡು ಸಮೃದ್ಧಿಯಿಂದ ಇರುವಂತೆ ಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
Advertisement
Advertisement
ಹೈಕಮಾಂಡ್‍ನಿಂದ ಈಗಾಗಲೇ ಬಿಜೆಪಿ ಪಾಳಯದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ತೀರ್ಮಾನವಾಗಿದೆ. ತಮಗೂ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಭರತೀಶ್ ಇತ್ತೀಚಿಗೆ ದೇವಾಲಯಗಳನ್ನು ಸುತ್ತುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಜೋರಾದ ಕಾಂಗ್ರೆಸ್ ಟಿಕೆಟ್ ಫೈಟ್- ಸ್ಥಳೀಯರಿಗೆ ಮಣೆ ಹಾಕದಿದ್ದರೆ ಬಂಡಾಯದ ಎಚ್ಚರಿಕೆ