ನವದೆಹಲಿ: ಫಿಟ್‍ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಕೆ.ಎಲ್ ರಾಹುಲ್ (KL Rahul) ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಏಷ್ಯಾ ಕಪ್ (Asia Cup 2023) ಪಂದ್ಯದಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ. ಈಗ ಇವರ ಬದಲಾಗಿ ಪಾಕ್ ವಿರುದ್ಧ ಆಡಿದ್ದ ಇಶಾನ್ ಕಿಶನ್ (Ishan Kishan) ಮುಂದುವರೆಯಬೇಕೇ? ಅಥವಾ ರಾಹುಲ್ ಅವರನ್ನು ಕಣಕ್ಕಿಳಿಸಬೇಕೇ? ಎಂಬ ಚರ್ಚೆ ಕೂಡ ಶುರುವಾಗಿದೆ.
ಶನಿವಾರ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿತು. ಅಲ್ಲಿ ರಾಹುಲ್ ಬದಲಿ ಆಟಗಾರ ಇಶಾನ್ ಕಿಶನ್ 81 ಎಸೆತಗಳಲ್ಲಿ 82 ರನ್ ಗಳಿಸಿದರು. ಈ ವರ್ಷದ ಮೇ ತಿಂಗಳಿನಿಂದ ಅವರು ಮಂಡಿನೋವಿನ ಗಾಯಕ್ಕೆ ಒಳಗಾಗಿ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಆಟದಿಂದ ಹೊರಗುಳಿದ ರಾಹುಲ್ ತಮ್ಮ ಆಯ್ಕೆಗೆ ಕೆಲವೇ ದಿನಗಳ ಮೊದಲು ಅಭ್ಯಾಸ ಆರಂಭಿಸಿದ್ದರು. ಇದನ್ನೂ ಓದಿ: Asia Cup 2023: ಬ್ಯಾಟಿಂಗ್ ಮಾಡದೆಯೇ ಟೀಂ ಇಂಡಿಯಾ ವಿರುದ್ಧ ದಾಖಲೆ ಬರೆದ ಪಾಕಿಸ್ತಾನ
ಏಷ್ಯಾ ಕಪ್ ಆರಂಭಿಕ ಮತ್ತು ನೇಪಾಳದ ವಿರುದ್ಧದ ಎರಡನೇ ಪಂದ್ಯಕ್ಕೂ ಮುನ್ನ ರಾಹುಲ್ ಎನ್‍ಸಿಎಯಲ್ಲಿ ಫಿಟ್‍ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಕ್ಯಾಂಡಿಯಲ್ಲಿ ಭಾರತ ತಂಡವನ್ನು ಸೇರಲಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ 5ನೇ ವಿಕೆಟಿಗೆ 141 ಎಸೆತಗಳಲ್ಲಿ 138 ರನ್ ಜೊತೆಯಾಟವಾಡುವ ಮೂಲಕ ಭಾರತ ತಂಡಕ್ಕೆ ಚೇತರಿಕೆ ನೀಡಿದ್ದರು.
ಇಶಾನ್ ಕಿಶನ್ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಭಾರತ ಈಗ ರಾಹುಲ್ ಅವರನ್ನು ಆಡಿಸಬೇಕೇ? ಸತತ ನಾಲ್ಕನೇ ಅರ್ಧಶತಕವನ್ನು ಬಾರಿಸಿದ ಇಶಾನ್ ಅವರನ್ನು ಮುಂದುವರಿಸಬೇಕೇ ಎಂಬ ವಿಷಯ ಜೋರಾಗಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ನಿಧನ
Web Stories