ವಿಜಯಪುರ: ಯಡಿಯೂರಪ್ಪನವರದ್ದು (BS Yediyurappa) ಕೆಜೆಪಿ 1, ಇದು ಕೆಜೆಪಿ 2, ಮೊಮ್ಮಗನದು ಕೆಜೆಪಿ 3 ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಬಿಜೆಪಿ ರಾಜ್ಯ ಘಟಕದ ನೂತನ ಪಟ್ಟಿಗೆ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಪಟ್ಟಿಯ ಆಯುಷ್ಯ 2024ರ ಲೋಕಸಭೆ ಚುನಾವಣೆ. 28 ಸೀಟ್ ತರುತ್ತೇನೆ ಅಂತಾ ಹೇಳಿದ್ದಾರೆ. 28 ರಲ್ಲಿ ಒಂದು ಕಡಿಮೆ ಬಿದ್ದರೂ ಚಿಕ್ಕಮಕ್ಕಳು ಹೇಗೆ ಸಿಗರೇಟ್ ಪ್ಯಾಕ್ ಮನೆ ಮಾಡಿರ್ತಾರೆ ಆ ರೀತಿಯಾಗಿ ಈ ಪಟ್ಟಿ ಹಾಗೆ ಬಿದ್ದು ಹೋಗುತ್ತದೆ ಎಂದರು. ಇದನ್ನೂ ಓದಿ: ಬಿಜೆಪಿ ರಾಜ್ಯ ಘಟಕಕ್ಕೆ 10 ಉಪಾಧ್ಯಕ್ಷರು; ಪದಾಧಿಕಾರಿಗಳ ತಂಡ ಪುನಾರಚನೆ – ಯಾರಿಗೆ ಯಾವ ಸ್ಥಾನ?
Advertisement
Advertisement
ಈಗ ರಾಜಕೀಯದಲ್ಲಿ ಏನಾಗಿದೆ ಎಂದರೆ ಲಂಪಟರು ಬಹಳ ಇದ್ದಾರೆ. ಅವರೆಲ್ಲ ಹಲ್ಕಾ ಕೆಲಸ ಮಾಡುತ್ತಾರೆ. ಇವತ್ತು ಮೌಲ್ಯಾಧಾರಿತ ರಾಜಕಾರಣ ಇಲ್ಲ. ಎಲ್ಲಾ ಕಳ್ಳರು, ಲಫಂಗರು ಹೆಚ್ಚು ಸೇರುತ್ತಿದ್ದಾರೆ. ಒಳ್ಳೆಯವರಿಗೆ ಬ್ಲ್ಯಾಕ್ಮೇಲ್ ಮಾಡುತ್ತಾರೆ. 2024 ರ ಚುನಾವಣೆಯ ನಂತರ ಮೇಜರ್ ಆಪರೇಷನ್ ಮಾಡದೇ ಇದ್ದರೆ ಮುಂದಿನ ನಿರ್ಣಯ ನಾನು ಮಾಡುತ್ತೇನೆ ಎಂದು ಹೇಳಿದರು.
Advertisement
ಸಾರ್ವಜನಿಕ ಕೆಲಸ ಮಾಡಲು, ಕ್ರಾಂತಿ ಮಾಡಲು ಅಧಿಕಾರ ಬೇಕಾಗಿಲ್ಲ ಮತ್ತು ಇದು ಕೊನೆಯಲ್ಲ. 2028ಕ್ಕೆ ಮತ್ತೆ ಕ್ಷೇತ್ರ ಮರು ವಿಂಗಡನೆ ಆಗಲಿದೆ. ವಿಜಯಪುರದ ಲೋಕಸಭಾ ಸ್ಥಾನ ಮೂರು ಆಗಲಿದ್ದು, ಲೋಕಸಭೆಯ ಸ್ಥಾನ 900 ಆಗಲಿದೆ. ಕರ್ನಾಟಕ ವಿಧಾನಸಭೆ 290 ಸ್ಥಾನಕ್ಕೆ ಏರಿಕೆ ಆಗಲಿದೆ. ಆಗ ಏನೇನು ಆಗುತ್ತದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.
Advertisement
ನಾನು ಸಿಎಂ ಆಗುವುದಿದ್ದರೆ ಯಾರು ತಪ್ಪಿಸಲು ಸಾಧ್ಯವಿಲ್ಲ. ಆಗಲಿಲ್ಲ ಅಂದರೆ ನನಗೇನು ಹತಾಶೆ ಇಲ್ಲ. ಸಿಎಂ ಅದವರು ಎಲ್ಲಿದ್ದಾರೆ ಈಗ? ಮಾಜಿ ಮುಖ್ಯಮಂತ್ರಿಗಳನ್ನು ಯಾರಾದ್ರೂ ಕೇಳ್ತಾರಾ? ಅವರಿಗೆ 100 ಜನರ ಕೂಡಿಸಲು ಹೇಳಿ. ಹಣಕೊಟ್ಟು ಕೊಟ್ಟು ತಮ್ಮ ಜಿಲ್ಲೆಯಲ್ಲಿ ಜನರನ್ನು ಕೂಡಿಸುವ ಪರಿಸ್ಥಿತಿ ಬಂದಿದೆ ಎಂದರು.
ನನ್ನ ಮಗನನ್ನು ಉದ್ಧಾರ ಮಾಡದೇ ಇದ್ದರೆ ನಾವು ಲೋಕಸಭೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಅವರು ಹಾಳಾಗಿ ಹೋಗಲಿ ಅಂತಾ ಕೊಟ್ಟು ಬಿಟ್ಟಿದ್ದಾರೆ. ಕಳ್ಳರ ಕೈಯಲ್ಲಿ ಬೀಗ ಕೊಟ್ಟಿದ್ದಾರೆ. ಆ ಬೀಗ 2024ರವರೆಗೆ ಮಾತ್ರ. 28 ಸೀಟ್ ಬರಲಿಲ್ಲ ಅಂದರೆ ಬೀಗ ಕಸಿದುಕೊಳ್ಳುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.