Sunday, 22nd July 2018

Recent News

ಸಿಎಂರನ್ನು ದಿಢೀರ್ ಭೇಟಿ ಮಾಡಿದ ಕಿಚ್ಚ ಸುದೀಪ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ನಟ ಕಿಚ್ಚ ಸುದೀಪ್ ದಿಢೀರ್ ಭೇಟಿ ಮಾಡಿದ್ದು, ಇದು ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯರನ್ನು ಸುದೀಪ್ ಭೇಟಿ ಮಾಡಿದ್ದಾರೆ. ಆದರೆ ಸಿಎಂ ಜೊತೆ ಭೇಟಿ ಮುಕ್ತಾಯವಾದ ಬಳಿಕ ಸುದೀಪ್ ಸ್ವತಃ ಮಾತನಾಡಿ, ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿಯ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ವಿಷ್ಣು ಸಮಾಧಿಯ 100 ಎಕರೆ ಜಾಗವನ್ನ ನಾವೇ ಖರೀದಿ ಮಾಡುತ್ತೇನೆ. ಸಮಾಧಿಯನ್ನು ಸ್ಥಳಾಂತರ ಮಾಡೋದು ಬೇಡ, ಸಮಾಧಿ ಜಾಗವನ್ನ ಪುಣ್ಯಭೂಮಿ ಅಂತಾ ಅಭಿವೃದ್ಧಿ ಮಾಡಿ ಎಂದು ಮನವಿ ಮಾಡಿದ್ದೇನೆ. ಭಾರತೀಯರ ಆಸೆಯಂತೆ ಇಲ್ಲಿ ಬದಲಾಗಿ ಸ್ಮಾರಕವನ್ನು ಮೈಸೂರಿನಲ್ಲಿ ಮಾಡಿ ಎಂದು ಹೇಳಿದ್ದೇನೆ. ಈ ಬಗ್ಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಜೊತೆಗೆ ಪುಣ್ಯಭೂಮಿ ಮಾಡಿಕೊಡೋದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಸುದೀಪ್ ಹೇಳಿದರು.

ಇನ್ನು ಸಿಎಂ ಜೊತೆ ರಾಜಕೀಯದ ಬಗ್ಗೆ ಮಾತನಾಡಿದ್ರಾ ಎಂದು ಕೇಳಿದ್ದಕ್ಕೆ ಸುದೀಪ್ ಕೈ ಮುಗಿದು ಹೊರಟು ಹೋಗಿದ್ದಾರೆ.

ಇದನ್ನು ಓದಿ: 45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ರೀ ರಿಲೀಸ್

 

Leave a Reply

Your email address will not be published. Required fields are marked *