ಬೆಂಗಳೂರು: ಕಿಚ್ಚ ಸುದೀಪ್ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ. ಮುಖ್ಯಮಂತ್ರಿ ಆಗೋಕೆ ಮಾಣಿಕ್ಯ ಮನಸ್ಸು ಮಾಡಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ.
ಸುದೀಪ್ ನಿಜ ಜೀವನದಲ್ಲಿ ಮುಖ್ಯಮಂತ್ರಿ ಆಗಲು ಹೊರಟಿಲ್ಲ. ಬದಲಾಗಿ ಸಿನಿಮಾದಲ್ಲಿ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಈಗಾಗಲೇ ಮಹೇಶ್ ಬಾಬು ನಟಿಸಿರುವ ಕೆಲವು ಪರಭಾಷಾ ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗಿವೆ. ಸದ್ಯಕ್ಕೆ ಪ್ರಿನ್ಸ್ ಮಹೇಶ್ ಬಾಬು ಅಭಿನಯದ `ಭರತ್ ಆನೇ ನೇನು’ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗೋಕೆ ಸಜ್ಜಾಗಿದೆ.
ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಗೆ ಸೇರಿರುವ ಈ ಚಿತ್ರವನ್ನ ಕನ್ನಡಕ್ಕೆ ರಿಮೇಕ್ ಮಾಡಲು ಹಲವು ನಿರ್ಮಾಪಕರು ಮುಂದಾಗಿದ್ದು,`ಭರತ್ ಅನ್ನೋ ನಾನು’ ಟೈಟಲ್ ಇಡೋಕೆ ಕನ್ನಡ ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಹೇಶ್ ಬಾಬು ನಿರ್ವಹಿಸಿದ್ದ ಸಿಎಂ ಪಾತ್ರವನ್ನ ಇಲ್ಲಿ ಕಿಚ್ಚ ಸುದೀಪ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಿಎಂ ಪಟ್ಟವನ್ನು ಅಲಂಕರಿಸಿರುವ ಮಹೇಶ್‍ಬಾಬು, ಸಮಾಜದ ಇಡೀ ವ್ಯವಸ್ಥೆಯನ್ನ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.