ಕಿಚ್ಚ ಸುದೀಪ್ (Sudeep) ನೇತೃತ್ವದ ಕರ್ನಾಟಕ ಬುಲ್ಡೋಜರ್ ಟೀಮ್ ಇಂದು ತೆಲುಗು ವಾರಿಯರ್ಸ್ (Telugu Warriors) ವಿರುದ್ಧ ಸಿಸಿಎಲ್ (CCL) ಪಂದ್ಯದಲ್ಲಿ ಸೆಣಸಲಿದೆ. ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಸಿಸಿಎಲ್ ಪಂದ್ಯಾವಳಿಯಲ್ಲಿ 2023ನೇ ಸಾಲಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಪ್ರಯತ್ನಕ್ಕಾಗಿ ತೆಲುಗು ವಾರಿಯರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ಕ್ರಮವಾಗಿ ಪಂದ್ಯಗಳನ್ನು ಆಡಲಿವೆ. ಜೈಪುರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ತಂಡಗಳು ಬೆಂಗಳೂರಿನಲ್ಲಿ ಇಂದು ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ.
Advertisement
ರಾಯಪುರ ಮತ್ತು ಜೈಪುರದಲ್ಲಿ ಎರಡು ದಿನಗಳ ಕಾಲ ಸಿಸಿಎಲ್ ಪಂದ್ಯಗಳು ನಡೆದಿವೆ. ಕ್ರಿಕೆಟ್ ಅಭಿಮಾನಿಗಳನ್ನು ಮತ್ತು ಸಿನಿಮಾ ಪ್ರೇಕ್ಷಕರನ್ನು ಸೆಳೆದ ಈ ಪಂದ್ಯಗಳು ಅದೇ ರೋಚಕತೆಯನ್ನು ಬೆಂಗಳೂರಿನಲ್ಲಿ ಮುಂದುವರೆಸಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಾವಳಿಯು ಪಂಜಾಬ್ ಮತ್ತು ತೆಲುಗು ವಾರಿಯರ್ಸ್ ನಂತರ ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಪಂದ್ಯಗಳು ಏರ್ಪಡಲಿವೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ
Advertisement
Advertisement
ಇಂದು ಮಧ್ಯಾಹ್ನ 2.30 ರಿಂದ ಸಂಜೆ 6.30ರವರೆಗೆ ಪಂಜಾಬ್ ಡಿ ಶೇರ್ ಮತ್ತು ತೆಲುಗು ವಾರಿಯರ್ಸ್ ನಡುವೆ ಪಂದ್ಯವಿದ್ದರೆ, ಸಂಜೆ 7 ಗಂಟೆಯಿಂದ ರಾತ್ರಿ 11ರವರೆಗೆ ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಪಂದ್ಯವಿದೆ. ಈ ಪಂದ್ಯದಲ್ಲಿ ಕಿಚ್ಚ ಸುದೀಪ್, ಪ್ರದೀಪ್, ಆರ್ಯ, ಅಖಿಲ್ ಅಕ್ಕಿನೇನಿ, ಸೋನು ಸೂದ್ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಪಂಜಾಬಿ ಚಿತ್ರರಂಗದ ಹಲವು ಕಲಾವಿದರು ಭಾಗಿಯಾಗಲಿದ್ದಾರೆ.