ಬೆಂಗಳೂರು: ನನ್ನನ್ನು ನಂಬಿ ಚಿತ್ರಮಂದಿರಗಳಿಗೆ ಬಂದು ನಿರಾಶಾರಾಗಿದ್ದವರ ಬಳಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆಗಿನ ಎಕ್ಸ್ ಕ್ಲೂಸೀವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಕ್ಷಮೆ ಕೇಳುವುದರಿಂದ ನಾನು ಸಣ್ಣವನಾಗಲ್ಲ ಅಥವಾ ನನಗೆ ಮುಜುಗರವಾಗಲ್ಲ. ಪ್ರಮೋಷನ್ ಮೇಲೆ ಸಿನಿಮಾ ನಿಂತಿದೆ. ನಾನು ಯಾಕೆ ಟ್ವೀಟ್ ಮಾಡಿಲ್ಲ ಅಂದ್ರೆ ನನಗೆ ಆ ಯಾವುದೇ ವಿಚಾರದಲ್ಲಿ ಯಾವುದೇ ನಿಖರ ಮಾಹಿತಿ ಇರಲಿಲ್ಲ. ನನ್ನ ತಪ್ಪು ಇನ್ನೊಬ್ಬರಿಗೆ ಡ್ಯಾಮೇಜ್ ಮಾಡಲ್ಲ ಎಂದರು. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ
Advertisement
Advertisement
ತಾಳ್ಮೆ ತಡೆದುಕೊಳ್ಳುವ ತಾಕತ್ತು ಇದೆ. ಹೀಗಾಗಿ ನನಗೆ ಇಂತಹ ಸಮಸ್ಯೆಗಳು ಬಂದಿದೆ ಅಷ್ಟೆ. 25 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು ಏನು ಮಾಡಿದ್ರಿ ಎಂದು ಕೇಳಿದರೆ ಜನರ ಪ್ರೀತಿ ಸಂಪಾದಿಸಿದ್ದೇನೆ ಅಂತ ಹೇಳಬಹುದು. ಸಿನಿಮಾ ಎಲ್ಲರಿಗೂ ಬೇಕು. ಊಟದಲ್ಲಿ ಕೂದಲು ಬಿದ್ದಿರುತ್ತೆ. ಆದರೆ ಆ ಕೂದಲನ್ನು ಬದಿಗಿರಿಸಿ ನಾವು ಊಟ ಮುಂದುವರಿಸಬೇಕೇ ಹೊರತು ಅದನ್ನು ಬಿಸಾಕಬಾರದು ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್
Advertisement
Advertisement
ಎಲ್ಲ ಕಡೆ ರಾಜಕೀಯ ನಡೆಯುತ್ತದೆ. ಇದೀಗ ನನಗೆ ಅರ್ಥವಾಗುತ್ತಿದೆ ನಿಜವಾದ ಸ್ನೇಹಿತರು ಗೊತ್ತಾಗುತ್ತಾರೆ. ಇದು ಷಡ್ಯಂತ್ರ ಎನ್ನುವುದು ನನಗೆ ಗೊತ್ತು. ಸಿನಿಮಾ ಮಾಡಿದ ನಾವು, ನಮ್ಮ ತಂಡಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಆದರೆ ಕೆಲವು ಕೆಟ್ಟ ಮನೋಭಾವ ಇರುವವರು ಪೈರಸಿ ಮಾಡುತ್ತಾರೆ. ಈ ವೇಳೆ ತಾಳ್ಮೆ ಕಳೆದುಕೊಂಡು ಯಾರೊಂದಿಗೆ ಯುದ್ಧ ಮಾಡಲಿ. ಕಾಣದೆ ಇರುವ ಶತ್ರುವಿನ ಮೇಲೆ ನಾನು ಹೇಗೆ ಯುದ್ಧ ಮಾಡಲಿ ಎಂದು ಸುದೀಪ್ ತಿಳಿಸಿದರು. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು
ಯಾರು ನಮ್ಮ ಪರ ನಿಂತಿದ್ದಾರೆ ಎಂಬುದನ್ನು ನಾವು ನೋಡಬೇಕು. ಈ ಸಮಯದಲ್ಲಿ ಯಾರು ನಮ್ಮವರು ಎಂದು ಗೊತ್ತಾಗುತ್ತದೆ. ನಾನು ಬದಲಾಗಿದ್ದೇನೆ ಎಂದು ಕಿಚ್ಚ ಸುದೀಪ್ ಹೇಳಿದರು.