– ನಾನು ಕೋಟಿಗೊಬ್ಬ3ಗೆ ವೇಟ್ ಮಾಡ್ತಿರಲಿಲ್ಲ
ಬೆಂಗಳೂರು: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ. ಅದು ಒಂದು ಬೇರೆ ರೀಸನ್. ಅದರಿಂದ ಸಿನಿಮಾಕ್ಕೆ ತೊಂದರೆ ಆಗಲಿಲ್ಲ, ಆಗೋದೂ ಇಲ್ಲ ಎಂದು ನಟ ಸುದೀಪ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆಗಿನ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡುತ್ತಾ, ಸಿನಿಮಾ ರಿಲೀಸ್ ಒಂದು ದಿನ ತಡವಾಗಿದ್ದರ ಕುರಿತು ಬೇಸರ ವ್ಯಕ್ತಪಡಿಸಿದರು. ನಾನು ಕೋಟಿಗೊಬ್ಬ3ಗೆ ವೇಟ್ ಮಾಡ್ತಿರಲಿಲ್ಲ. ನಾನು ನೋಡುತ್ತಾ ಇದ್ದೆ. ಅಭಿಮಾನಿಗಳು ಸಿನಿಮಾ ರಿಲೀಸ್ ಆಗುವುದು ತಡವಾಗಿದ್ದರೂ ಮಳೆಯಲ್ಲಿ ಬಂದು ಸಿನಿಮಾ ನೋಡಿದ್ದಾರೆ. ನಾನು ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡಬೇಕು. ಒಂದು ಸಿನಿಮಾ ಯಶಸ್ಸು ಕಂಡ್ರೆ ಸುಮ್ಮನೆ ಕೂರುವುದಿಲ್ಲ. ಮುಂದೆ ಇನ್ನೂ ಚೆನ್ನಾಗಿ ಏನು ಮಾಡಬೇಕು ಎಂದು ಯೋಚನೆ ಮಾಡುತ್ತೇನೆ. ಸಂದರ್ಶನದಲ್ಲಿ ಎಲ್ಲ ಪ್ರಶ್ನೆ ಹೇಗೆ ಮುಖ್ಯವಾಗುತ್ತೋ ಹಾಗೇ ಸಿನಿಮಾ ಆಯ್ಕೆಯೂ ಮುಖ್ಯವಾಗುತ್ತದೆ. ಹೀರೊ ಆಗೋವರೆಗೂ ಮಾತ್ರ ನಂತರ ಜನರನ್ನು ಸಿನಿಮಾ ಮಂದಿರಕ್ಕೆ ಎಳೆದು ತರಬೇಕು ಎಂದು ಹೇಳುವ ಮೂಲಕ ಸಿನಿಮಾ ಆಯ್ಕೆ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ
Advertisement
Advertisement
ಅರ್ಜುನ್ ಜನ್ಯ ಒಳ್ಳೆ ಸಂಗೀತವನ್ನು ನೀಡಿದ್ದಾರೆ. ಮ್ಯೂಸಿಕ್ ಇಂದ ಕೂಡಾ ಸಿನಿಮಾ ಹಾಳಾಗುತ್ತದೆ. ಆದರೆ ಅರ್ಜುನ್ ಅವರ ಮ್ಯೂಸಿಕ್ ಮಾತ್ರ ಚೆನ್ನಾಗಿದೆ. ರವಿಶಂಕರ್ ನನ್ನದೂ ಒಂದು ಲಾಂಗ್ ಜರ್ನಿಯಾಗಿದೆ. ಅವರು ಬೆಸ್ಟ್ ಪರ್ಸನ್. ಶಿವಾ ಮತ್ತು ಸತ್ಯಗೆ 2 ಪಾತ್ರವನ್ನು ಮಾಡಬೇಕಿತ್ತು. ಮೇಕಪ್, ಬಾಡಿ ಲ್ಯಾಂಗ್ವೇಜನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇವೆ ಎಂದು ಕೋಟಿಗೊಬ್ಬ3 ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು
Advertisement
ಊಟದಲ್ಲಿ ಕೂದಲು ಬಿದ್ದರೆ ಪಕ್ಕಕ್ಕಿಡಬೇಕು ಹೊರತು ಹಾವು ಅಂತ ತಿಳಿದು ಊಟ ಬಿಡಬಾರದು. ಅದು ಕೂದಲಷ್ಟೇ ಅಲ್ಲವೇ. ಇದು ಯಾರ ಷಡ್ಯಂತ್ರ ಅನ್ನೋದು ನನಗೆ ಗೊತ್ತಿದೆ. ಅಂಥವರನ್ನ ದೂರಕ್ಕಿಡುತ್ತೇನೆ. ಹಣ ನನಗೆ ಮುಖ್ಯವಲ್ಲ. ಕೆಲವೊಮ್ಮೆ ಬಿಟ್ಟುಕೊಡಬೇಕಾಗುತ್ತದೆ. ಆದಷ್ಟು ಬಿಟ್ಟುಕೊಡ್ತೀನಿ. ನನಗೂ ಹೆಂಡತಿ ಮಕ್ಕಳು ಇದ್ದಾರೆ. ಮಂಜು, ಕುಮಾರ್, ಸುಪ್ರೀತ್ ಅಂತವರಿಂದ ಇವತ್ತು ಕೋಟಿಗೊಬ್ಬ ಸಿನಿಮಾವನ್ನ ಕಾಪಾಡೋಕೆ ಸಾಧ್ಯವಾಗಿದ್ದು. ವಿರೋಧಿಗಳಿಗೆ ನಾನು ಖಡಕ್ ಸಂದೇಶ ಕೊಡಲ್ಲ. ನಿನ್ನೆ ಸಿನಿಮಾ ರಿಲೀಸ್ ಆಯ್ತಲ್ಲ ಅದೇ ಉತ್ತರವಾಗಿದೆ. ಚಿಲ್ಲರೆ ಬುದ್ಧಿಗಳು ಇವೆಲ್ಲ. ಶತ್ರುಗಳು ಅನ್ನೋದು ದೊಡ್ಡ ಸ್ಥಾನವಾಗಿದೆ. ಆ ಹೆಸರನ್ನ ಇಂಥವರಿಗೆ ಹೇಳಕಾಗಲ್ಲ. ಅಂಥವರಿಗೆ ಉತ್ತರ ಕೊಡಲ್ಲ ನಾನು ಎಂದು ಹೇಳಿದ್ದಾರೆ.
ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ. ಅದು ಒಂದು ಬೇರೆ ರೀಸನ್. ಅದರಿಂದ ಸಿನಿಮಾಕ್ಕೆ ತೊಂದರೆ ಆಗಲಿಲ್ಲ. ಆಗೋದೂ ಇಲ್ಲ. ಸೂರಪ್ಪ ಬಾಬು ಸಿನಿಮಾ ಮಾಡಬೇಕು ಅಂದಾಗ ನಾನು ಹೇಳ್ದೆ ಕೋಟಿಗೊಬ್ಬ 2 ಇಂದ ಒಂದು ನಾಟ್ ಇತ್ತು. ಅದನ್ನ ಸೂರಪ್ಪ ಬಾಬುಗೆ ಹೇಳಿದ್ದೆ. ಆಗ ಶಿವಕಾರ್ತಿಕ್ ಹೊಸಬರು ಅವರು ಕಥೆ ಹೇಳಿದ್ರು, ಕೊನೆಗೆ ಅದನ್ನ ಡೆವಲಪ್ ಮಾಡಿದೆವು ಎಂದು ಸಿನಿಮಾ ಕಥೆ ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ.