`ಕೆಜಿಎಫ್ 2′ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಬಗ್ಗೆ `ವಿಕ್ರಾಂತ್ ರೋಣ’ ಸ್ಟಾರ್ ಕಿಚ್ಚ ಮಾತನಾಡಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಯಶ್ ಮತ್ತು ಕಿಚ್ಚನ ನಡುವೆ ತಂದಿಟ್ಟು ತಮಾಷೆ ನೋಡುವವರಿಗೆ ಕಿಚ್ಚನ ಈ ಉತ್ತರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
`ವಿಕ್ರಾಂತ್ ರೋಣ’ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಸುದೀಪ್ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ಯಶ್ ಕುರಿತು ಮಾತನಾಡಿದ ಕಿಚ್ಚನ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಿರೂಪಕ, ನೀವು ಯಶ್ ಅವರನ್ನ ಯಾವುದೇ ಕಾರ್ಯಕ್ರಮ ಪರಿಚಯಿಸಬೇಕಾದರೆ ಹೇಗೆ ಸ್ವಾಗತ ಮಾಡುತ್ತೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್
ಯಶ್ ಬಹಳ ಎನರ್ಜಿಟಿಕ್ ಆಕ್ಟರ್, ಅದ್ಬುತ ಕನಸುಗಾರ, ಸಾಧಕ ಎಂದಿದ್ದಾರೆ. ಈ ಪದಗಳಿಂದಲೇ ಅವರನ್ನ ಸ್ವಾಗತಿಸುತ್ತೇನೆ ಎಂದು ಸುದೀಪ್ ಮಾತನಾಡಿದ್ದಾರೆ. ಕಿಚ್ಚನ ಈ ಮಾತು ಕೇಳಿ ಯಶ್ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ. ಈ ಮೂಲಕ ಯಶ್ ಸಾಧನೆಯ ಬಗ್ಗೆ ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.