ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಅವರ ಹುಟ್ಟು ಹಬ್ಬಕ್ಕೆ ವಿಭಿನ್ನವಾಗಿ ವಿಶ್ ಮಾಡಿ ಸುದ್ದಿಯಾಗಿದ್ದ ಸಮಂತಾ, ಇದೀಗ ಮತ್ತೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ ಹೊಸ ಸಿನಿಮಾಗೆ ವಿಭಿನ್ನವಾಗಿ ಶೀರ್ಷಿಕೆ ಇಡಲಾಗಿದ್ದು, ಅದು ಈಗ ರಿವೀಲ್ ಆಗಿದೆ. ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!
ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಮತ್ತು ಸಮಂತಾ ಒಟ್ಟಾಗಿ ನಟಿಸುತ್ತಿದ್ದರಿಂದ ಈ ಚಿತ್ರಕ್ಕೆ ಯಾವ ರೀತಿಯ ಟೈಟಲ್ ಇಡಬಹುದು ಎಂದು ಚರ್ಚೆ ಶುರುವಾಗಿತ್ತು. ಈಗ ಅದಕ್ಕೆ ಫುಲ್ ಸ್ಟಾಪ್ ಬಿದ್ದಿದ್ದು ಚಿತ್ರಕ್ಕೆ ‘ಖುಷಿ’ ಎಂದು ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕರು. ಸಮಂತಾ ಮತ್ತು ವಿಜಯ್ ದೇವರಕೊಂಡ ಅವರ ತೆರೆಯ ಮೇಲಿನ ಪ್ರೀತಿಗೆ ‘ಖುಷಿ’ಯೇ ಸಾಕ್ಷಿಯಾಗಿದೆ ಎಂದಿದ್ದಾರೆ ನಿರ್ದೇಶಕರು. ಇನದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ
ಟೈಟಲ್ ರಿವೀಲ್ ಗಾಗಿಯೇ ತಯಾರಾದ ಪೋಸ್ಟರ್ ನಲ್ಲಿ ಸಮಂತಾ ಕಲರ್ ಫುಲ್ ಸೀರೆ ಧರಿಸಿ, ಫಳಫಳ ಹೊಳೆಯುತ್ತಿದ್ದಾರೆ. ಥೇಟ್ ಮದುವಣಗಿತ್ತಿಯಂತೆಯೇ ಕಾಣುತ್ತಾರೆ. ದೇವರಕೊಂಡ ಅವರದ್ದು ಕಾಶ್ಮೀರಿ ಶೈಲಿಯ ಡ್ರೆಸ್. ಹೀಗಾಗಿ ಸಿನಿಮಾದಲ್ಲಿ ಕತೆಯು ಹೇಗಿರಬಹುದು ಎಂಬ ಕುತೂಹಲ ಮೂಡಿಸಿದೆ ಪೋಸ್ಟರ್. ಇದನ್ನೂ ಓದಿ: ಟಗರು-2ನಲ್ಲಿ ಶಿವಣ್ಣನ ಜತೆ ನಟಿಸಬೇಕಿತ್ತು ಅಪ್ಪು!
ಸಿನಿಮಾದ ಶೂಟಿಂಗ್ ಇನ್ನೂ ನಡೆದಿದ್ದರೂ, ಟೈಟಲ್ ಜೊತೆ ಫಸ್ಟ್ ಲುಕ್ ಮತ್ತು ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಚಿತ್ರತಂಡ ಬಹಿರಂಗಗೊಳಿಸಿದೆ. ಡಿಸೆಂಬರ್ 23 ರಂದು ಖುಷಿ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಶಿವ ನಿರರ್ವಾನ ನಿರ್ದೇಶನ ಮಾಡಿದ್ದು, ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮತ್ತು ನಿರೀಕ್ಷೆ ಹೆಚ್ಚು ಮಾಡಿದೆ.