ಬೆಂಗಳೂರು: ಕೆಜಿಎಫ್ 2 ಸಿನಿಮಾವನ್ನು ನಾನು ವೀಕ್ಷಿಸಿದ್ದೇನೆ. ನಿಜಕ್ಕೂ ನಾನು ಇಷ್ಟಪಟ್ಟಿದ್ದೇನೆ ಎಂದು ನಟಿ ರಾಧಿಕಾ ಪಂಡಿತ್ ಚಿತ್ರದ ಬಗ್ಗೆ ತಿಳಿಸಿದರು.
ಟ್ರೈಲರ್ ರಿಲೀಸ್ ಆದ ನಂತರ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು, 3 ವರ್ಷದ ನಂತರ ನಾನು ಎಲ್ಲರೊಂದಿಗೆ ಮಾತನಾಡುತ್ತಿದ್ದೇನೆ. ಈ ಸಿನಿಮಾಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಕೆಜಿಎಫ್ ಚಿತ್ರವನ್ನು ನಾನು ವೀಕ್ಷಿಸಿದ್ದೇನೆ. ನನ್ನ ಪತಿಯ ಸಿನಿಮಾ ಎಂದು ನಾನು ಹೊಗಳುತ್ತಿಲ್ಲ. ಕೆಜಿಫ್ ಎನ್ನುವ ಕಾರಣಕ್ಕೆ ನನಗೆ ಸಿನಿಮಾದ ಮೇಲೆ ಪ್ರೀತಿ ಇದೆ. ಸಿನಿಮಾವನ್ನು ನಾನು ನಿಜಕ್ಕೂ ಇಷ್ಟಪಟ್ಟೆ ಎಂದು ಹೇಳಿದರು.
ವಿಜಯ್, ಪ್ರಶಾಂತ್ ನಿಲಜ್, ರವಿ ಬಸೂರ್ ಯಶ್, ಶ್ರೀನಿಧಿ ಪ್ರತಿಯೊಬ್ಬರು ಈ ಸಿನಿಮಾದ ಕಂಬಂಗಳಿದ್ದಂತೆ. ಅದರಲ್ಲೂ ರವೀನಾ ಟಂಡನ್ ಅವರ ಅಭಿನಯ ನನಗೆ ತುಂಬಾ ಇಷ್ಟವಾಯಿತು. ಗುಸ್ಕೆ ಮಾರೆಂಗೆ ಡೈಲಾಗ್ ತುಂಬಾ ಇಷ್ಟವಾಯಿತು. ಸಂಜಯ್ ದತ್ ಅವರನ್ನು ಈ ರೀತಿ ನಾನು ಎಂದೂ ನೋಡಿರಲಿಲ್ಲ. ಆದರೆ ಇಡೀ ಸಿನಿಮಾದಲ್ಲಿ ನಿಮ್ಮ ಇರುವಿಕೆ ನನಗೆ ತುಂಬಾ ಇಷ್ಟವಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ
ಇದೇ ವೇಳೆ ಶಿವರಾಜ್ ಕುಮಾರ್ ಅವರೇ ನೀವು ಇಲ್ಲಿ ಬಂದಿದ್ದಕ್ಕೆ ಸಂತೋಷವಾಗಿದೆ. ಅಪ್ಪು ಅವರು ನಮ್ಮನ್ನಗಲಿದ್ದಾರೆ. ಆದರೆ ಅವರನ್ನು ಶಿವಣ್ಣನ್ನಲ್ಲೆ ಕಾಣುತ್ತಿದ್ದೇವೆ ಎಂದು ಪುನೀತ್ ರಾಜ್ಕುಮಾರ್ ಅವರನ್ನು ನೆನೆದರು. ಇದನ್ನೂ ಓದಿ: ನನ್ನ 45 ವರ್ಷಗಳ ಸಿನಿಜರ್ನಿಯಲ್ಲಿ ಕೆಜಿಎಫ್-2 ಒಂದು ಅದ್ಭುತ ಪಾಠ: ಸಂಜಯ್ ದತ್