ಕೆಜಿಎಫ್-2 ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಇಡೀ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿದೆ. ಈ ಇವೆಂಟ್‍ಗೆ ಬಾಲಿವುಡ್ ಮುನ್ನಾಬಾಯ್ ಸಂಜಯ್ ದತ್, ರವೀನಾ ಆಗಮಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲಿಯೂ ಮುನ್ನಬಾಯ್ ಮತ್ತು ರಾಕಿಬಾಯ್ ಅವರನ್ನು ಒಂದೇ ವೇದಿಕೆಯಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ವೇಳೆ ಸಂಜಯ್ ಸಿನಿಮಾ ಕುರಿತು ಮಾತನಾಡಿದ್ದು, ತನ್ನ ಸಿನಿಜರ್ನಿಯಲ್ಲಿ ಈ ಸಿನಿಮಾ ದೊಡ್ಡ ಉಡುಗೊರೆ ಎಂದಿದ್ದಾರೆ.
Advertisement
ಟ್ರೈಲರ್ ರಿಲೀಸ್ ಆದ ನಂತರ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು, 45 ವರ್ಷಗಳ ನನ್ನ ಸಿನಿಜರ್ನಿಯಲ್ಲಿ ಕೆಜಿಎಫ್-2 ಒಂದು ಅದ್ಭುತವಾದ ಪಾಠವಾಗಿದೆ. ಸಿನಿಮಾ ಸೆಟ್‍ನಲ್ಲಿ ಇದ್ದ ಶಿಸ್ತು, ಸಿನಿಮಾ ಮಾಡಬೇಕು ಎಂದು ಈ ತಂಡಕ್ಕೆ ಇರುವ ಗುರಿ ನೋಡಿ ತುಂಬಾ ಖುಷಿಯಾಗುತ್ತೆ. ಈ ತಂಡದಿಂದ ನಾನು ತುಂಬಾ ಕಲಿತಿದ್ದೇನೆ. ಈ ಸಿನಿಮಾ ಕುಟುಂಬದ ರೀತಿ ಎಂದು ಸಂತೋಷವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಕ್ಕೂ ಹೆಚ್ಚು ವ್ಯೂ
Advertisement
Advertisement
ಇಲ್ಲಿರುವ ಪ್ರತಿಯೊಬ್ಬ ಜೂನಿಯರ್ ಆರ್ಟಿಸ್ಟ್ ಕೂಡ ತುಂಬಾ ಮುಖ್ಯವಾಗಿದ್ದರು. ಎಲ್ಲರನ್ನು ಗೌರವದಿಂದ ನೋಡಿಕೊಳ್ಳುತ್ತಿದ್ದರು. ನಾನು ಯಶ್ ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಕೋ ಆರ್ಟಿಸ್ಟ್ ಆಗಿ ನೀವು ತುಂಬಾ ಚೆನ್ನಾಗಿ ಬೆಂಬಲ ಕೊಟ್ಟಿದ್ದಾರೆ. ನನ್ನನ್ನು ಅಣ್ಣ ಎಂದು ಪ್ರೀತಿಯಿಂದ ಕರೆದಿದ್ದಾರೆ.
Advertisement
ಥ್ಯಾಂಕ್ಸ್ ಪ್ರಶಾಂತ್ ಸರ್ ನನಗೆ ಅದ್ಭುತವಾದ ಪಾತ್ರವನ್ನು ಕೊಟ್ಟಿದ್ದೀರಾ. ಅಧೀರಾ ಪಾತ್ರ ಕೊಟ್ಟಿದ್ದಕ್ಕೆ ಧನ್ಯವಾದ. ಚಿತ್ರತಂಡದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ತಿಳಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ನಾನು ನನ್ನ ಪತ್ನಿಗೆ ಧನ್ಯವಾದವನ್ನು ಹೇಳುತ್ತೇನೆ. ಏಕೆಂದರೆ ಈ ಪಾತ್ರ ಮಾಡಲು ನನಗೆ ಪ್ರೋತ್ಸಾಹ ಕೊಟ್ಟರು. ಇದನ್ನೂ ಓದಿ: ಕೆಜಿಎಫ್-2 ಸಿನಿಮಾದ ಪೂರ್ತಿ ಕ್ರೆಡಿಟ್ ನಮ್ಮ ಕನ್ನಡ ಇಂಡಸ್ಟ್ರಿಗೆ ಹೋಗಬೇಕು: ರಾಕಿಬಾಯ್