ಮಡಿಕೇರಿ: ಕೊಡಗು (Kodagu) ಜಿಲ್ಲೆ ನಾಪೋಕ್ಲುವಿನ (Napoklu) ಚೆಯ್ಯಂಡಾಣೆ ಗ್ರಾಮದ ಚೇಲವಾರ ಫಾಲ್ಸ್‌ನಲ್ಲಿ (Chelavara Falls) ಮುಳುಗಿ ಯುವಕನೊಬ್ಬ ನೀರುಪಾಲಾದ ಘಟನೆ ನಡೆದಿದೆ.
ಕೊಡಗಿಗೆ ಪ್ರವಾಸಕ್ಕೆಂದು ಕೇರಳದಿಂದ ಬಂದಿದ್ದ ಯುವಕ (Youth) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕೇರಳದ ಇರಿಟ್ಟಿಯ ರಶೀದ್ (25) ಮೃತ ಯುವಕ ಎಂದು ಗುರುತಿಸಲಾಗಿದೆ. ಚೆಯ್ಯಂಡಾಣೆ ಸಮೀಪದ ಚೇಲವಾರ ಫಾಲ್ಸ್ನಲ್ಲಿ ಈ ಘಟನೆ ನಡೆದಿದೆ. ಚೇಲಾವರ ಫಾಲ್ಸ್‌ಗೆ ಬಂದಿದ್ದ ರಶೀದ್ ಈಜಲು ನೀರಿಗೆ ಇಳಿದಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೆಬ್ ಸೀರಿಸ್‍ನಿಂದ ಪ್ರೇರಣೆ ಪಡೆದು ನಕಲಿ ನೋಟ್ ದಂಧೆ – ಇಬ್ಬರೂ ಆರೋಪಿಗಳು ಅರೆಸ್ಟ್
Advertisement
Advertisement
ಫಾಲ್ಸ್ ನೋಡಲು ಮೂವರು ಸ್ನೇಹಿತರೊಂದಿಗೆ ಬಂದಿದ್ದ ರಶೀದ್ ಆಳ ತಿಳಿಯದೇ ನೀರಿಗೆ ಇಳಿದಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಈಜುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದು, ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಪಾಕ್ ISIಗೆ ಸೇನಾ ಮಾಹಿತಿ ರವಾನೆ – ಭಾರತೀಯ ರಾಯಭಾರಿ ಕಚೇರಿ ಉದ್ಯೋಗಿ ಅರೆಸ್ಟ್
Advertisement
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿ ಶವವನ್ನು ಮೇಲಕ್ಕೆ ತೆಗೆದಿದ್ದಾರೆ. ಭದ್ರತೆ ಇಲ್ಲದೆ ಇರುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ನಾಪೊಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ – ನ್ಯಾಯಾಧೀಶರ ವಿರುದ್ಧ ವಕೀಲನಿಂದ ಅವಹೇಳನಕಾರಿ ಪೋಸ್ಟ್
Advertisement
ಅಪಾಯ ಇದೆ ಎಂದು ಹೇಳುತ್ತಿದ್ದರೂ ಪ್ರವಾಸಿಗರು ನೀರಿಗೆ ಇಳಿಯುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರ ನಿರಾಕರಣೆ; ಪ್ರೇಮಿಗಳಿಬ್ಬರು ನೇಣಿಗೆ ಶರಣು