ಹೈದರಾಬಾದ್: ವೆಬ್ ಸೀರಿಸ್ ಒಂದರಿಂದ ಪ್ರೇರಣೆ ಪಡೆದು ನಕಲಿ ನೋಟ್ (Fake Currency) ಪ್ರಿಂಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರೂ ಆರೋಪಿಗಳನ್ನು ಹೈದರಾಬಾದ್ (Hyderabad) ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು, ವನಂ ಲಕ್ಷ್ಮೀನಾರಾಯಣ ಹಾಗೂ ಆತನ ಸಹಚರ ಎರುಕಳ ಪ್ರಣಯ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ವನಂ ಲಕ್ಷ್ಮೀನಾರಾಯಣ, ಕಂಪ್ಯೂಟರ್ ಪರಿಣತಿಯನ್ನು ಹೊಂದಿದ್ದು, ಕೃತ್ಯಕ್ಕಾಗಿ ಸ್ಕ್ರೀನ್ ಪ್ರಿಂಟರ್, ಗ್ರೀನ್ ಫಾಯಿಲ್ ಪೇಪರ್, ಜೆಕೆ ಎಕ್ಸೆಲ್ ಬಾಂಡ್ ಪೇಪರ್‌ಗಳು, ಕಟರ್‌ಗಳು ಮತ್ತು ಲ್ಯಾಮಿನೇಷನ್ ಯಂತ್ರವನ್ನು ಬಳಸುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಾಕ್ ISIಗೆ ಸೇನಾ ಮಾಹಿತಿ ರವಾನೆ – ಭಾರತೀಯ ರಾಯಭಾರಿ ಕಚೇರಿ ಉದ್ಯೋಗಿ ಅರೆಸ್ಟ್
Advertisement
Advertisement
ಪ್ರಣಯ್ ಕುಮಾರ್, ಪ್ರಮುಖ ಆರೋಪಿ ತಯಾರಿಸಿದ ನಕಲಿ ನೋಟ್‍ಗಳನ್ನು, ಮಾರುಕಟ್ಟೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಲಾವಣೆ ಮಾಡುತ್ತಿದ್ದ. ಇದೇ ರೀತಿ ಆತ ಅಂಗಡಿಯೊಂದರಲ್ಲಿ 20 ಸಾವಿರ ರೂ. ನಕಲಿ ನೋಟ್ ಚಲಾವಣೆ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ನಡೆಸಿದಾಗ ಪ್ರಮುಖ ಆರೋಪಿಯ ಹೆಸರನ್ನು ಈತ ಹೇಳಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯಕ್ಕೆ `ಫರ್ಝಿ’ ವೆಬ್ ಸೀರಿಸ್ ಪ್ರೇರಣೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 500 ರೂ. ಮುಖಬೆಲೆಯ ಸುಮಾರು 4 ಲಕ್ಷ ರೂ. ನಕಲಿ ನೋಟ್‍ಗಳನ್ನು, ಕೃತ್ಯಕ್ಕೆ ಬಳಸಿದ ಯಂತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಚುನಾವಣೆ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚಿಸಿದ ಡ್ರೋನ್ ಪ್ರತಾಪ್: ದೂರು ದಾಖಲು