ತಿರುವನಂತಪುರಂ: ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸಭೆ ಬೆನ್ನಲ್ಲೆ ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಕೆಲಸದ ಸ್ಥಳಗಳಲ್ಲೂ, ಪ್ರಯಾಣದ ವೇಳೆಯೂ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ. ಒಂದು ವೇಳೆ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಬೇಕೆಂದು ಇದೇ ವೇಳೆ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಮೂಲಕ ಕೊವೀಡ್ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂದು ಕೇರಳ ಸರ್ಕಾರ ಎಚ್ಚರಿಕೆ ನೀಡಿದೆ.
Advertisement
Advertisement
ಕೋವಿಡ್ 4 ನೇ ಅಲೆ ವ್ಯಾಪಕಗೊಳ್ಳಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಇಂದಿನಿಂದಲೇ ಪೊಲೀಸರು ಮಾಸ್ಕ್ ಧರಿಸದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆ ಆಗಬೇಕು ಅಂತ ಪ್ರಶಾಂತ್ ಕಿಶೋರ್ ಬಯಸಿದ್ರು
Advertisement
Advertisement
ಇತ್ತ ಇಂದು ವಿವಿಧ ರಾಜ್ಯಗಳ ಸಿಎಂಗಳ ಜೊತೆ ವೀಡಿಯೋ ಕಾನ್ಫರೇನ್ಸ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿಗೆ ಕರ್ನಾಟಕ ರಾಜ್ಯದ ಕೋವಿಡ್ ಪರಿಸ್ಥಿತಿಯ ವರದಿ ಒಪ್ಪಿಸಲಾಯಿತು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸಿಎಂ ಅವರು ಪ್ರಧಾನಿಗೆ ಮಾಹಿತಿ ಕೊಟ್ಟರು. ನಾಲ್ಕನೇ ಅಲೆಗೆ ಕೈಗೊಂಡ ಸಿದ್ಧತೆ ಬಗ್ಗೆ, ಲಸಿಕೆ, ಬೂಸ್ಟರ್ ಲಸಿಕೆಯ ಪ್ರಗತಿ ಹಾಗೂ ಲಸಿಕೆಗಳ ಬಗ್ಗೆ ಪಿಎಂಗೆ ಅಂಕಿ ಅಂಶ ಸಮೇತ ಮಾಹಿತಿ ನೀಡಿದರು.
Despite managing the COVID crisis well as compared to other countries, we can see cases' uptick in states now. We have to stay alert. It's clear that the COVID challenge has yet not been surpassed: PM Modi after interacting with state CMs on the COVID-19 situation in the country pic.twitter.com/iYLYcjc97p
— ANI (@ANI) April 27, 2022
ಈ ವೇಳೆ ಪ್ರಧಾನಿಯವರು ಟೆಸ್ಟಿಂಗ್ ಹೆಚ್ಚಿಸಲು ಸೂಚನೆ ನೀಡಿದರು. ಆರಂಭದಲ್ಲೆ ಟೆಸ್ಟಿಂಗ್ ಹೆಚ್ಚಿಸುವ ಮೂಲಕ ಕೊರೊನಾ ಕಂಟ್ರೋಲ್ ಗೆ ಸೂಚಿಸಿದರು. ಸೋಂಕು ಕಡಿಮೆ ಇದೆ ಅಂತ ಟೆಸ್ಟಿಂಗ್ ಕಡಿಮೆ ಮಾಡಬೇಡಿ. ಟೆಸ್ಟಿಂಗ್ ಪ್ರಮಾಣ ಹೆಚ್ಚಳ ಮಾಡಿ ಸೋಂಕಿತರನ್ನ ಬೇಗ ಟ್ರೇಸ್ ಮಾಡಬೇಕು ಎಂದು ಪ್ರಧಾನಿಯವರು ಸಭೆಯಲ್ಲಿ ಸೂಚನೆ ನೀಡಿದರು.