LatestMain PostNational

ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆ ಆಗಬೇಕು ಅಂತ ಪ್ರಶಾಂತ್ ಕಿಶೋರ್ ಬಯಸಿದ್ರು

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಕಾಂಗ್ರೆಸ್ ಮುಖ್ಯಸ್ಥರಾಗಬೇಕು ಅಂತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಯಸಿದ್ದರು ಎಂದು ಕಾಂಗ್ರೆಸ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ಎಐಸಿಸಿ, ಕಾಂಗ್ರೆಸ್ ಮುಖ್ಯಸ್ಥರು ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಪುನರ್‍ರಚನೆ ಸೇರಿದಂತೆ ದೇಶದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರಲು ಸಭೆ ನಡೆಸಿದರು. ನಂತರ ಅವರು ಚುನಾವಣಾ ತಂತ್ರಕ್ಕೆ ಮಾತ್ರ ಸೀಮಿತವಾಗಿರಲು ಬಯಸಿದ್ದಾರೆ ಎಂದು ಹೇಳಿದ್ದಾರೆ.

ಕಿಶೋರ್ ಅವರು ಕಾಂಗ್ರೆಸ್‍ನಲ್ಲಿ ಪ್ರಧಾನಿ ಅಭ್ಯರ್ಥಿ ಮತ್ತು ಪಕ್ಷದ ಮುಖ್ಯಸ್ಥರಾಗಿ ಹೊಸಬರು ಆಗಬೇಕು ಎಂದು ಬಯಸಿದ್ದರು. ಎರಡು ವಾರಗಳ ಕಾಲ ತೀವ್ರ ಚರ್ಚೆಯ ನಂತರ, ಕಿಶೋರ್ ಇದೀಗ ತಮ್ಮ ಹಳೆಯ ಪಕ್ಷಕ್ಕೆ ಸೇರಬಹುದೆಂಬ ಊಹಾಪೋಹಗಳು ಹುಟ್ಟಿಕೊಂಡದೆ. ಇದನ್ನೂ ಓದಿ: ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಹೆಚ್ಚು ಗಮನಹರಿಸಬೇಕು: ರಾಹುಲ್ ಸಲಹೆ

ಮಂಗಳವಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಚರ್ಚೆ ಮತ್ತು ಅವರ ವಿಷಯ ಮಂಡನೆಯ ಬಳಿಕ ಕಾಂಗ್ರೆಸ್ ಅಧ್ಯಕ್ಷರು 2024ರ ಕಾರ್ಯಪಡೆಯನ್ನು ರಚಿಸಿದರು ಹಾಗೂ ಆ ತಂಡದ ಭಾಗವಾಗಿ ಅವರನ್ನು ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದರು. ನಿಗದಿ ಜವಾಬ್ದಾರಿಯನ್ನು ತಿಳಿಸಲಾಗಿತ್ತು. ಅವರು ಅದನ್ನು ತಿರಸ್ಕರಿಸಿದ್ದಾರೆ. ಅವರು ಪಕ್ಷಕ್ಕೆ ನೀಡಿದ ಸಲಹೆಗಳು ಮತ್ತು ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ ಎಂದು ಟ್ವೀಟ್ ಮಾಡುವ ಮೂಲಕ ಸುರ್ಜೇವಾಲಾ ಅವರು ತಿಳಿಸಿದ್ದರು. ಇದನ್ನೂ ಓದಿ: ಸರ್ಕಾರಿ ಶಾಲೆ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ

ಮೂಲಗಳು ಐಎಎನ್‍ಎಸ್‍ಗೆ ತಿಳಿಸಿರುವ ಪ್ರಕಾರ, ಕಾಂಗ್ರೆಸ್‍ನ ಕಾರ್ಯಶೈಲಿ ವಿಭಿನ್ನವಾಗಿದೆ ಮತ್ತು ಪಕ್ಷವನ್ನು ಒಂದೇ ಕಿಟಕಿಯಿಂದ ಚಲಾಯಿಸಲು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಕಿಶೋರ್ ಅವರನ್ನು 2024ರ ಚುನಾವಣೆಗೆ ಎಂಪವರ್ಡ್ ಆಕ್ಷನ್ ಗ್ರೂಪ್‍ಗೆ ಸೇರಲು ಆಹ್ವಾನಿಸಿದ್ದಾರೆ.

Leave a Reply

Your email address will not be published.

Back to top button