– ಝಿರೋದಾ ಸಂಸ್ಥಾಪಕ, ಗಲ್ಫ್ ಆಟಗಾರ್ತಿ ಕೂಡ ಆಯ್ಕೆ
ಬೆಂಗಳೂರು: ಪ್ರತಿವರ್ಷ ಸರ್ಕಾರ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಯನ್ನು (Kempegowda International Award) ಮೂವರಿಗೆ ನೀಡಲು ಸರ್ಕಾರ ತೀರ್ಮಾನ ಮಾಡಿದ್ದು, ಆಯ್ಕೆಯಾದ ಸಾಧಕರ ಹೆಸರನ್ನು ಡಿಸಿಎಂ ಡಿಕೆ ಶಿವಕುಮಾರ್ (D.K.Shivakuamar) ಎಲ್ಲರ ಸಮ್ಮುಖದಲ್ಲಿ ಬಹಿರಂಗಪಡಿಸಿದ್ದಾರೆ.
Advertisement
ಪ್ರತಿವರ್ಷ ಕೆಂಪೇಗೌಡ ಜಯಂತಿಯ ಪ್ರಯುಕ್ತ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಮೂವರು ಸಾಧಕರಿಗೆ ನೀಡಲಾಗುತ್ತದೆ. ಈ ಬಾರಿಯೂ ಸಹ ಒಂದು ಸಂಸ್ಥೆ ಹಾಗೂ ಮತ್ತಿಬ್ಬರು ಸಾಧಕರಿಗೆ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿರುವುದಾಗಿ ಡಿಕೆಶಿ ತಿಳಿಸಿದ್ದಾರೆ. ಸಾಧಕರನ್ನು ಆಯ್ಕೆ ಮಾಡುವ ಸಲುವಾಗಿ ಬಿ.ಎಲ್ ಶಂಕರ್ ಸಮಿತಿಯನ್ನು ರಚಿಸಲಾಗಿದ್ದು, ಬೆಂಗಳೂರಿನ ಜಯದೇವ ವಿಜ್ಞಾನ ಸಂಸ್ಥೆ (Jayadeva Institute of Science) ಸಾಧಕರ ಪಟ್ಟಿಯನ್ನು ಸೇರಿದೆ. ಈ ಆಸ್ಪತ್ರೆ 1600 ಬೆಡ್‌ಗಳನ್ನು ಹೊಂದಿದ್ದು, ಸಮಾಜದ ಎಲ್ಲಾ ವರ್ಗದವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಒದಗಿಸುತ್ತಿದೆ. ಅಲ್ಲದೇ ತೀರಾ ಬಡವರಿಗೆ ಉಚಿತ ಚಿಕಿತ್ಸೆಯನ್ನು ಸಹ ಈ ಸಂಸ್ಥೆ ನೀಡುತ್ತಿದೆ. ಇದನ್ನೂ ಓದಿ: ಮಂಗಳವಾರದಿಂದ ರಾಜ್ಯದಲ್ಲಿ 2ನೇ ವಂದೇ ಭಾರತ್ ರೈಲು ಸಂಚಾರ ಶುರು
Advertisement
Advertisement
ಇನ್ನೂ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಝಿರೋದಾ (Zerodha) ಎಂಬ ಉದ್ಯಮವನ್ನು ಪ್ರಾಂಭಿಸಿ ಉನ್ನತ ಮಟ್ಟಕ್ಕೆ ಬೆಳೆದು ನಿಂತು ಯುವಉದ್ಯಮಿಯಾಗಿರುವ ಝಿರೋದಾ ಕಂಪನಿ ಸಂಸ್ಥಾಪಕ ನಿತಿನ್ ಕಾಮತ್ (Nithin Kamath) ಅವರು ಸಹಾ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ನಿತಿನ್ ಕಾಮತ್ ತಮ್ಮ ಉದ್ಯಮದಲ್ಲಿ ಬರುವ 25% ರಷ್ಟು ಹಣವನ್ನು ಸಾಮಾಜ ಸೇವೆಗಾಗಿ ಮುಡಿಪಿಟ್ಟಿದ್ದಾರೆ. ಇದನ್ನೂ ಓದಿ: ಇನ್ಮುಂದೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
Advertisement
ಬೆಂಗಳೂರಿನ (Bengaluru) ಯುವ ಗಾಲ್ಫ್ ಆಟಗಾರ್ತಿಯಾಗಿರುವ ಅದಿತಿ ಅಶೋಕ್ (Aditi Ashok) ಎಂಬವರು ಕೂಡಾ ಈ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಈಕೆ ವಿಶ್ವ ಗಾಲ್ಫ್ (Golf) ಆಟದಲ್ಲಿ ಮಹತ್ತರ ಸಾಧನೆ ಮಾಡಿದ್ದು, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದು ದೇಶದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು (Siddaramaiah) ಜೂನ್ 27ನೇ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಈ ಕಾರ್ಯಕ್ರಮವು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ. ಈ ಪ್ರಶಸ್ತಿಯ ಜೊತೆಗೆ ಸಾಧಕರಿಗೆ 5 ಲಕ್ಷ ರೂ. ನಗದು ದೊರೆಯಲಿದೆ ಎಂದು ಡಿಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರದ ಅಕ್ಕಿ ಬೇಕಿದ್ದರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡ್ಬೇಕು: ಪ್ರಲ್ಹಾದ್ ಜೋಶಿ