CinemaLatestMain PostSouth cinema

ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್

ಟಾಲಿವುಡ್ (Tollywood) ನಟಿ ಕೀರ್ತಿ ಸುರೇಶ್ (Keerthi Suresh) ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಂದ ಸದ್ದು ಮಾಡುತ್ತಿದ್ದ ನಟಿ ಕೀರ್ತಿ, ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ದಸರಾ ಹಬ್ಬದಂದು ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ. ದುಬಾರಿ ಕಾರು ಖರೀದಿಸುವ ಮೂಲಕ ಮಹಾನಟಿ ಸುದ್ದಿಯಲ್ಲಿದ್ದಾರೆ.

`ಸರ್ಕಾರು ವಾರಿ ಪಾಟ’ ಚಿತ್ರದ ಸಕ್ಸಸ್ ನಂತರ ಕೊಂಚ ಸೈಲೆಂಟ್ ಆಗಿರುವ ನಟಿ ಕೀರ್ತಿ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. ಸೈಲೆಂಟ್ ಆಗಿ ಒಂದೊಂದೇ ಸಿನಿಮಾಗಳನ್ನ ಕಂಪ್ಲೀಟ್ ಮಾಡಿ ಕೊಡುತ್ತಿದ್ದಾರೆ. ಇದೀಗ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಟಿ, ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೈಲ್ವಾನ್‌ಗಳು: ಎನು ಇದು ಹೊಸ ಟ್ವಿಸ್ಟ್

 

View this post on Instagram

 

A post shared by Keerthy Suresh (@keerthysureshofficial)

ದಸರಾ ಹಬ್ಬದ(Dasara Festival) ವೇಳೆ ಕೀರ್ತಿ ಗ್ಯಾರೇಜ್ ಹೊಸ ಕಾರು ಸೇರ್ಪಡೆಯಾಗಿದೆ. BMW*7 ಮನೆಗೆ ಎಂಟ್ರಿ ಕೊಟ್ಟಿದೆ. 1.78 ಕೋಟಿ ಬೆಲೆ ಹೊಸ ಕಾರಿಗೆ ಪೂಜೆ ಮಾಡಿ, ಬಳಿಕ 7 ಆಸನಗಳ ಐಷಾರಾಮಿ ಕಾರಿನಲ್ಲಿ ಎಂದಿನಂತೆ ತಮ್ಮ ಮುದ್ದಿನ ಶ್ವಾನದ ಜೊತೆ ಕಾರು ರೈಡ್ ಹೋಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಟಿ ಕೀರ್ತಿ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಕೀರ್ತಿ ಸುರೇಶ್ ನಾನಿ ಹೊಸ ಸಿನಿಮಾ ದಸರಾಗೆ ನಾಯಕಿಯಾಗಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಅಬ್ಬರಿಸಲಿದೆ.

Live Tv

Leave a Reply

Your email address will not be published. Required fields are marked *

Back to top button