ದೊಡ್ಮನೆ ಆಟ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಾಕಷ್ಟು ರೋಚಕ ತಿರುವುಗಳೊಂದಿಗೆ ಟಿವಿ ಬಿಗ್ ಬಾಸ್(Bigg Boss House) ಸದ್ದು ಮಾಡುತ್ತಿದೆ. ಹೀಗಿರುವಾಗ ಬಿಗ್ ಬಾಸ್ ಮನೆಗೆ ಕುಸ್ತಿಪಟುಗಳ ಎಂಟ್ರಿ ಆಗಿದೆ. ದಸರಾ ಹಬ್ಬದಂದು(Dasara Festival) ಪೈಲ್ವಾನ್‌ಗಳು ದೊಡ್ಮನೆಗೆ ಬಂದಿದ್ದಾರೆ.
ಬಿಗ್ ಬಾಸ್(Bigg Boss) ಈಗ ರಣರಂಗವಾಗಿದೆ. 18 ಸ್ಪರ್ಧಿಗಳಿದ್ದ ದೊಡ್ಮನೆಯಲ್ಲಿ ಐಶ್ವರ್ಯ(Aishwarya) ಎಲಿಮಿನೇಷನ್ ನಂತರ 17 ಜನ ಆಗಿದ್ದಾರೆ. ಇನ್ನೂ ದೊಡ್ಮನೆಯ ಮುಖ್ಯದ್ವಾರ ಓಪನ್ ಆಗೋದು ಎರಡೇ ಬಾರಿ ಸ್ಪರ್ಧಿಗಳು ಎಂಟ್ರಿ ಕೊಡುವಾಗ ಮತ್ತು ಎಲಿಮಿನೇಟ್ ಆಗುವಾಗ. ಹೀಗಿರುವಾಗ ಇದೀಗ ಮತ್ತೆ ಮುಖ್ಯದ್ವಾರ ಓಪನ್ ಆಗಿದೆ. ಒಟ್ಟಿಗೆ ಇಬ್ಬರು ಕುಸ್ತಿಪಟುಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಅರ್ಧಂಬರ್ಧ ಪ್ರೇಮಕಥೆ’ಯಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ
ಇದೀಗ ಮನೆಗೆ ಎಂಟ್ರಿ ಪೈಲ್ವಾನ್‌ಗಳು ಎಂಟ್ರಿ ಕೊಟ್ಟಿದ್ದಾರೆ. ಹೊಸ ಟಾಸ್ಟ್‌ವೊಂದನ್ನ ನೀಡಲಾಗಿದ್ದು, ದೊಡ್ಮನೆಯ ಸ್ಪರ್ಧಿಗಳು ಮತ್ತು ಕುಸ್ತಿಪಟುಗಳ ಜಟಾಪಟಿ ಅಷ್ಟೇ ರೋಚಕವಾಗಿತ್ತು. ಮನೆಯ ಗಂಡು ಸ್ಪರ್ಧಿಗಳ ನಂತರ ಕುಸ್ತಿಪಟುಗಳ ಜೊತೆ ಮಹಿಳಾ ಸ್ಪರ್ಧಿಗಳು ಅಖಾಡಕ್ಕೆ ಇಳಿದಿದ್ದಾರೆ. ಒಟ್ನಲ್ಲಿ ದಸರಾ ಹಬ್ಬದ ಪ್ರಯುಕ್ತ ಮನೆಗೆ ಎಂಟ್ರಿ ಕೊಟ್ಟಿರುವ ಪೈಲ್ವಾನ್‌ಗಳ ಆಟ ನೋಡುಗರಿಗೆ ಮನರಂಜನೆ ಕೊಡುವುದು ಗ್ಯಾರೆಂಟಿ.
ವೀಕೆಂಡ್‌ಗೆ ಹತ್ತಿರರುವ ಬಿಗ್ ಬಾಸ್ ಎರಡನೇ ವಾರದಲ್ಲಿ ಅದ್ಯಾವ ಸ್ಪರ್ಧಿ ಮನೆಯಿಂದ ಹೊರನಡೆಯಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.