ವರುಣ್ ಧವನ್ ಜೊತೆ ಕೀರ್ತಿ ಸುರೇಶ್ ರೊಮ್ಯಾನ್ಸ್

Public TV
1 Min Read
varun dhawan

ಸೌತ್ ಬ್ಯೂಟಿ ಕೀರ್ತಿ ಸುರೇಶ್ (Keerthy Suresh) ಅವರು ಪಾತ್ರಗಳನ್ನ ಆಯ್ಕೆ ಮಾಡುವಾಗ ತಮಗೆ ಡಿಫರೆಂಟ್ ಎನಿಸುವಂತಹ ರೋಲ್‌ಗಳ ಮೂಲಕ ಗಮನ ಸೆಳೆಯುತ್ತಾರೆ. ಇದೀಗ ಬಾಲಿವುಡ್‌ಗೆ (Bollywood) ನಟಿ ಹಾರಿದ್ದಾರೆ. ವರುಣ್ ಧವನ್ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.

Keerthy Suresh 2

ಸ್ಟಾರ್‌ ನಟ ನಾನಿ (Nani) ಜೊತೆ ‌ʻದಸರಾʼ ಸಿನಿಮಾ ಮೂಲಕ ತೆರೆಯ ಮೇಲೆ ಅಬ್ಬರಿಸಿದ ಮೇಲೆ ಈಗ ಬಾಲಿವುಡ್‌ನತ್ತ (Bollywood) ಮಹಾನಟಿ ಕೀರ್ತಿ ಮುಖ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತೆ ನಾಯಕಿ ಹೊಸ ಬಗೆಯ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತನಗೆ ಒಪ್ಪುವ ಪಾತ್ರ ಸಿಕ್ಕ ಕಾರಣ ಬಾಲಿವುಡ್‌ಗೆ ನಟಿ ಲಗ್ಗೆ ಇಟ್ಟಿದ್ದಾರೆ.

Keerthy Suresh 1

ಬಾಲಿವುಡ್‌ನ ಲವರ್ ಬಾಯ್ ವರುಣ್ ಧವನ್ (Varun Dhawan) ಜೊತೆ ಮೊದಲ ಬಾರಿಗೆ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ವರುಣ್ 18ನೇ ಚಿತ್ರಕ್ಕೆ ಪ್ರಮುಖ ನಾಯಕಿಯಾಗಿ ಕೀರ್ತಿ ಸುರೇಶ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮೊದಲ ನಾಯಕಿಯಾಗಿ ಕೀರ್ತಿ ಫೈನಲ್‌ ಆಗಿದ್ದು, 2ನೇ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ.

keerthy suresh 4

ಈ ಸಿನಿಮಾ ಪಕ್ಕ ಆಕ್ಷನ್-ಪ್ಯಾಕ್ಡ್ ಆಗಿರಲಿದೆಯಂತೆ. ಈ ಚಿತ್ರದಲ್ಲಿ ವರುಣ್ ಧವನ್ ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದಾರೆ. ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಪತ್ನಿ ಪ್ರಿಯಾ ಅಟ್ಲೀ (Priya Atlee) ನಿರ್ಮಾಣ ಮಾಡುತ್ತಿದ್ದಾರೆ. ‘ಜವಾನ್’ (Jawan) ನಿರ್ದೇಶಕ ಅಟ್ಲಿ ಕುಮಾರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದನ್ನೂ ಓದಿ:2 ಸಾವಿರಕ್ಕೆ ʼಆಪನ್ ಹೈಮರ್’ ಚಿತ್ರದ ಟಿಕೆಟ್ ಸೇಲ್- ಬೆಂಗಳೂರಿನಲ್ಲಿ ಹೆಚ್ಚಿದ ಡಿಮ್ಯಾಂಡ್

ಇತ್ತೀಚಿಗೆ ಕೀರ್ತಿ ಸುರೇಶ್ ಹೆಚ್ಚಾಗಿ ತಮ್ಮ ಮದುವೆ ವಿಚಾರವಾಗಿಯೇ ಸುದ್ದಿಯಾಗುತ್ತಿದ್ದರು. ಬಳಿಕ ಮದುವೆ ಸುದ್ದಿಗೆ ನಟಿ ಸ್ಪಷ್ಟನೆ ನೀಡಿದ್ದರು. ಸದ್ಯಕ್ಕೆ ನಾನು ಮದುವೆಯಾಗೋದಿಲ್ಲ. ಸಿನಿಮಾ ಕೆರಿಯರ್ ಕಡೆ ಗಮನ ಕೊಡುತ್ತೇನೆ ಅಂತಾ ಗಾಸಿಪ್‌ಗೆ ನಟಿ ಬ್ರೇಕ್ ಹಾಕಿದ್ರು. ಈಗ ಸೌತ್- ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಮಾಡ್ತಾ ಇದ್ದಾರೆ.

Share This Article